ಹಿರೇಮಠ ಟ್ರಾೃಕ್ಟರ್ ಸಾಧನೆ ಶ್ಲಾಘನೀಯ

20Rayabag2
Published on

ರಾಯಬಾಗ: ಪಟ್ಟಣದ ಹಿರೇಮಠ ಟ್ರ್ಯಾಕ್ಟರ್ ಸಾಧನೆ ದಕ್ಷಿಣ ಭಾರತದಲ್ಲಿ ಗೋಚರಿಸುತ್ತಿರುವುದು ಹೆಮ್ಮೆ ಸಂಗತಿ ಎಂದು ಪಪಂ ಅಧ್ಯಕ್ಷ ಅಶೋಕ ಅಂಗಡಿ ಹೇಳಿದರು.

ಪಟ್ಟಣದ ಹಿರೇಮಠ ಟ್ರ್ಯಾಕ್ಟರ್ ಶೋರೂಂ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ 2024-25ನೇ ಸಾಲಿನಲ್ಲಿ ಹೆಚ್ಚು (208) ಟ್ರಾೃಕ್ಟರ್ ಮಾರಾಟ ಮಾಡಿ ದಕ್ಷಿಣ ಭಾರತದಲ್ಲಿ ನಂ.1 ಡೀಲರ್‌ಶಿಫ್ ಪುರಸ್ಕಾರ ಪಡೆದ ಹಿರೇಮಠ ಟ್ರಾೃಕ್ಟರ್ ಮಾಲೀಕ ರಾಜಶೇಖರ ಹಿರೇಮಠ ಅವರಿಗೆ ರಾಯಬಾಗ ಮೆಕಾನಿಕ್ ಅಸೋಸಿಯೇಷನ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಧಕರಿಗೆ ಸತ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಶೋರೂಂ ಮಾಲೀಕ ರಾಜಶೇಖರ ಹಿರೇಮಠ ಮಾತನಾಡಿ, ರೈತರ ಸಹಕಾರದಿಂದ ನಮ್ಮ ಹಿರೇಮಠ ಟ್ರ್ಯಾಕ್ಟರ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆ. ಮೆಕಾನಿಕ್ ವೃತ್ತಿ ಮಾಡುವವರು ವೈದ್ಯರಿಗೆ ಸಮಾನ ಎಂದು ಹೇಳಿದರೆ ಅತಿಶೋಕ್ತಿಯಾಗಲಾರದು ಎಂದು ಹೇಳಿದರು. ಸಂಜಯ ಹಿರೇಮಠ, ಉಮೇಶ ಮಸಾಲಜಿ, ಅಜಿತ್ ಬಾವಿ, ರೇವಪ್ಪ ನಾಯಿಕ, ವಿನಾಯಕ ಕುಲಗುಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net