ಹಿರೇಮಠ ಜಾತ್ರಾ ಮಹೋತ್ಸವ ಡಿ. 1ರಿಂದ

JAATRE
Published on

ನರೇಗಲ್ಲ: ಪಟ್ಟಣದ ಹಿರೇಮಠದ 7ನೇ ಜಾತ್ರಾ ಮಹೋತ್ಸವವನ್ನು ಡಿಸೆಂಬರ್ 1 ರಿಂದ 11 ರವರೆಗೆ ಅದ್ದೂರಿಯಾಗಿ ಆಚರಿಸಲು ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಮಲ್ಲಿಕಾರ್ಜುನ ಶಿವಾಚಾರ್ಯರು, ಜಾತ್ರೆಗಳು ಮೋಜು ಮಸ್ತಿಗಾಗಬಾರದು. ಈ ಜಾತ್ರೆಯಿಂದ ಜನರ ಮನಪರಿವರ್ತನೆಯಾದರೆ ಅದಕ್ಕೊಂದು ಅರ್ಥ ಬರುತ್ತದೆ. ಆರು ವರ್ಷಗಳಿಂದ ಇದೇ ರೀತಿಯ ಹಿನ್ನೆಲೆಯೊಂದಿಗೆ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷ ಮಹಾಸಾಧ್ವಿ ಶಿರೋಮಣಿ ಹೇಮರಡ್ಡಿ ಮಲ್ಲಮ್ಮನ ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದರು.
ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಹಿರೇಮಠದ ಜಾತ್ರೆಯು ಸಾಹಿತ್ಯಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಪೂರಕವಾದ ಜಾತ್ರೆಯಾಗಿದೆ. ಇಲ್ಲಿ ಜಾತ್ರೆ ನಡೆಯುತ್ತಿದೆ ಎಂದರೆ ಜಿಲ್ಲೆಯ ಎಲ್ಲರ ಮನಸು ಈ ಕಡೆಗೇ ತಿರುಗಿರುತ್ತವೆ ಎಂದರು.

ನಿವೃತ್ತ ಪ್ರಾಚಾರ್ಯ ಡಿ. ಎ. ಅರವಟಗಿಮಠ ಮಾತನಾಡಿ, ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಯೋಧರ ದಿನವನ್ನಾಗಿ ಆಚರಿಸುವುದು ಸೂಕ್ತ. ಇದರಿಂದ ನಮ್ಮನ್ನು, ದೇಶ ಕಾಯುವ ಯೋಧರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಶಿಕ್ಷಣ ಇಲಾಖೆ ಅಧಿಕಾರಿ ಕೆ.ಪಿ. ಸಾಲಿಮಠ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ, ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಯೋಧ ಎಸ್.ಎಂ. ಸಂಗನಾಳ, ಉಮೇಶಗೌಡ ಪಾಟೀಲ, ಡಾ. ಎಲ್.ಎಸ್. ಗೌರಿ, ಪ.ಪಂ. ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ನಿಂಗಪ್ಪ ಕಣವಿ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಕಳಕಣ್ಣವರ, ಮುತ್ತಣ್ಣ ಪಲ್ಲೇದ, ಶಿಕ್ಷಕ ಸುರೇಶ ಹಳ್ಳಿಕೇರಿ, ಶಿವಯೋಗಿ ಜಕ್ಕಲಿ, ಗುರುರಾಜ ಕುಲಕರ್ಣಿ, ಬಸವೇಶ ಜೋಳದ, ಎಸ್.ಕೆ. ಪಾಟೀಲ, ಗುರುಪಾದಪ್ಪ ಬೆಲ್ಲದ, ನಿವೃತ್ತ ಶಿಕ್ಷಕ ಪಾಯಪ್ಪಗೌಡ್ರ, ಶರಣಪ್ಪ ಜುಟ್ಲ, ಸಿದ್ದಪ್ಪ ರಾಗಿ ಇತರರಿದ್ದರು. ಈಶ್ವರ ಬೆಟಗೇರಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net