ಶಾಲೆಗೆ 56,000 ರೂ. ದೇಣಿಗೆ ನೀಡಿದ ಶಿಕ್ಷಕರು

Untitled design (2)
ಹೂವಿನಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು 56,000 ರೂ.ಗಳನ್ನು ಇತೀಚೆಗೆ ದೇಣಿಗೆ ನೀಡಿದರು. ಮುಖ್ಯ ಶಿಕ್ಷಕ ಮಧುನಾಯ್ಕ.ಎಲ್, ಎಸ್ಡಿಎಂಸಿ ಅಧ್ಯಕ್ಷ ಪಾಟೀಲ ಪಾಲಾಕ್ಷಗೌಡ, ನಿವೃತ್ತ ಶಿಕ್ಷಕ ಮುದೇಗೌಡರ ಜಯಣ್ಣ ಇತರರಿದ್ದರು.
Published on

ಹೂವಿನಹಡಗಲಿ: ತಾಲೂಕಿನ ಹಿರೇಕೊಳಚಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಶಿಕ್ಷಕರು 56,000 ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಕಲಿಕಾ ಪ್ರಗತಿಗೆ ವಿನಿಯೋಗ

ಶಾಲೆಯ ಶಿಕ್ಷಕ ಗಡ್ಡಿ ಶಿವಕುಮಾರ್ ಹಾಗೂ ನಿವೃತ್ತ ಶಿಕ್ಷಕ ಎಮ್.ಡಿಗ್ಯಾನಾಯ್ಕ ತಲಾ 10000 ರೂ, ಶಿಕ್ಷಕರಾದ ಶಿಕ್ಷಕ ಎಚ್.ಎಮ್.ಮಹಾದೇವಯ್ಯ, ಎಲ್.ಯಂಕ್ಯಾನಾಯ್ಕ, ಷಂಷದ್ ಬೇಗಂ, ಎಮ್.ಶಿವಪ್ರಕಾಶ್, ಎಮ್.ಕೆ.ವಿನೂತ, ಕೆ.ಶಕುಂತಲಾ ತಲಾ 6000 ರೂ. ದೇಣಿಗೆ ನೀಡಿದ್ದು, ಶಾಲಾ ಮಕ್ಕಳ ಕಲಿಕಾ ಪ್ರಗತಿಗೆ ವಿನಿಯೋಗಿಸಲು ಶಿಕ್ಷಕರ ಆಲೋಚನೆಯಾಗಿದೆ.

ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರು ಶಾಲೆಗೆ ಸುಮಾರು ಒಂದು ಲಕ್ಷ ರೂ. ದೇಣಿಗೆ ನೀಡಿದ್ದರು. ಶಾಲೆಯ ಮುಖ್ಯಶಿಕ್ಷಕ ಮಧುನಾಯ್ಕ.ಎಲ್, ಎಸ್ಡಿಎಂಸಿ ಅಧ್ಯಕ್ಷ ಪಾಟೀಲ ಪಾಲಾಕ್ಷಗೌಡ, ನಿವೃತ್ತ ಶಿಕ್ಷಕ ಮುದೇಗೌಡರ ಜಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net