

ಹಿರೇಕೆರೂರ: ಬೈಕ್‌ನಿಂದ ಬಿದ್ದು ಮಹಿಳೆ ಮೃತಪಟ್ಟ ಘಟನೆ ತಾಲೂಕಿನ ವರಹ-ಶಿಕಾರಿಪುರ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಪಟ್ಟಣದ ಚೌಡೇಶ್ವರಿ ನಗರದ ನಿವಾಸಿ ಜಯಮ್ಮ ಶೇಖಪ್ಪ ದಂಡಗಿಹಳ್ಳಿ (52) ಮೃತ ಮಹಿಳೆ.
ಇವರು ಬೈಕ್‌ನ ಹಿಂಬದಿ ಕುಳಿತು ಹೊರಟಿದ್ದರು. ದಾರಿ ಮಧ್ಯೆ ಬೈಕ್‌ನಿಂದ ಬಿದ್ದಿದ್ದರಿಂದ ಬಲವಾದ ಹೊಡೆತ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.