ಶ್ರೀ ವೀರಭದ್ರೇಶ್ವರ ದೇವರ ಜಯಂತ್ಯುತ್ಸವ ಅ. 4ರಂದು

2-HKR VEERBHADRA
Published on

ಹಿರೇಕೆರೂರ: ತಾಲೂಕಿನ ಹಂಸಭಾವಿ ಗ್ರಾಮದ ಶಿವಯೋಗಾಶ್ರಮದಲ್ಲಿ ಅ. 4ರಂದು ಬೆಳಗ್ಗೆ 11ಗಂಟೆಗೆ ಬೇಡ ಜಂಗಮ ಸಮಾಜದ ವತಿಯಿಂದ ಶ್ರೀ ವೀರಭದ್ರೇಶ್ವರ ದೇವರ ಜಯಂತ್ಯುತ್ಸವ ಮತ್ತು ಜನಜಾಗೃತಿ ಸಮಾರಂಭ ಏರ್ಪಡಿಸಲಾಗಿದೆ.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶಿವಯೋಗಾಶ್ರಮದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಮಡ್ಲೂರಿನ ಮುರುಘರಾಜೇಂದ್ರ ಮಹಾಸ್ವಾಮೀಜಿ, ರಾಣೇಬೆನ್ನೂರಿನ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ, ಹಿರೇಮಾಗಡಿ ಮುರುಘರಾಜೇಂದ್ರ ಮಹಾಸ್ವಾಮೀಜಿ, ಲಿಂಗದಹಳ್ಳಿಯ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸುವರು. ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸುವರು. ಹಂಸಭಾವಿ ಬೇಡ ಜಂಗಮ ಸಮಾಜದ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಕರಬಸಯ್ಯ ಬಸರಿಹಳ್ಳಿಮಠ, ಗ್ರಾಪಂ ಅಧ್ಯಕ್ಷ ರಾಜಶೇಖರ ಹುಚ್ಚಗೂಂಡರ, ಮೋಹನಗೌಡ ಪಾಟೀಲ, ಮೃತ್ಯುಂಜಯ ಬಾಸೂರ, ಮಲ್ಲಯ್ಯನವರು ಹಿರೇಮಠ, ಚಂದ್ರಯ್ಯ ಹಳ್ಳೂರುಮಠ, ಡಾ. ಸಿದ್ಧಲಿಂಗಸ್ವಾಮಿ ಚತ್ರದಮಠ, ಇತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net