ಹಿರೇಕೆರೂರಲ್ಲಿ ಶಿಕ್ಷಕರ ದಿನಾಚರಣೆ

4-hkr radhakrishnan
Published on

ಹಿರೇಕೆರೂರ: ಪಟ್ಟಣದ ಗುರಭವನದಲ್ಲಿ ಸೆ. 5ರಂದು ಬೆಳಗ್ಗೆ 10 ಗಂಟೆಗೆ ಜಿಪಂ, ತಾಪಂ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ವತಿಯಿಂದ ಶಿಕ್ಷಕರ ದಿನಾಚರಣೆ ಏರ್ಪಡಿಸಲಾಗಿದೆ. ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸುವರು. ತಹಸೀಲ್ದಾರರಾದ ಡಾ. ಎಚ್. ಪ್ರಭಾಕರಗೌಡ, ಕೆ. ಗುರುಬಸವರಾಜ, ತಾಪಂ ಇಒ ಎಚ್. ಶಶಿಧರ್, ಟಿ.ಆರ್. ಮಲ್ಲಾಡದ, ಸಿಪಿಐ ಬಸವರಾಜ ಪಿ.ಎಸ್., ಪಪಂ ಮುಖ್ಯಾಧಿಕಾರಿ ಪಂಪಾಪತಿ ನಾಯಕ್, ಬಿ.ಪಿ. ಬಿದರಿ, ಚುನಾಯಿತ ಜನಪ್ರತಿನಿಧಿಗಳು, ಶಿಕ್ಷಕರ ವಿವಿಧ ಸಂಘಗಳ ಪದಾಧಿಕಾರಿಗಳು ಭಾಗವಹಿಸುವರು. ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪ್ರಕಾಶ ಮನ್ನಂಗಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net