

ಹಿರೇಕೆರೂರ: ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ತಾಲೂಕಿನ ಹಿರೇಬೂದಿಹಾಳ ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅ. 16 ರಂದು ಬೆಳಗ್ಗೆ 10.30ಕ್ಕೆ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಸವರಾಜ ಕೋಡಿಹಳ್ಳಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಿಪ್ಪಾಯಿಕೊಪ್ಪದ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಯು.ಬಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸುವರು. ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ನಿವೃತ್ತ ನ್ಯಾಯಾಧೀಶ ದೇವಾನಂದ ಪುಟ್ಟಪ್ಪ ನಾಯಕ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ ಹಾಗೂ ವಿವಿಧ ಗಣ್ಯರು ಭಾಗವಹಿಸುವರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸಸ್ವಿಗೊಳಿಸಬೇಕು ಎಂದರು.
ಡಾ. ಬಸವರಾಜ ಜಿ.ಎಂ., ಕಾಳಪ್ಪ ಲಮಾಣಿ, ಲಲಿತಮ್ಮ ಹಿರೇಮಠ, ಗುತ್ತೆಮ್ಮ ಸುಣಗಾರ, ರೇಖಾ ಯಲಿಗಾರ, ಕೌಶಲ್ಯಾ ಗೋಪಾಳಿ, ಕಾವ್ಯಾ ಹುಡೇದ, ಪೂಜಾ ಮ್ಯಾಚರ, ಶಾರದಮ್ಮ ಹುಬ್ಬಳ್ಳೇರ, ರೇಖಾ ಅಂಗಡಿ ಹಾಗೂ ರೈತರು ಇದ್ದರು.