

ಹಿರೇಕೆರೂರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಹಲವು ವೈವಿಧ್ಯ ಹೊಂದಿದೆ. ವೃತ್ತಿನಿರತರ ಕೌಶಲ ವೃದ್ಧಿಸಲು ತರಬೇತಿ ನೀಡಲಾಗುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ತಾಲೂಕಿನ ತಾವರಗಿ ಗ್ರಾಮದ ಪ್ರಕಾಶ ಬಣಕಾರ ಮಳಿಗೆಯಲ್ಲಿ ಶುಕ್ರವಾರ ಪಿಎಂ ವಿಶ್ವಕರ್ಮ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಆರಂಭದಲ್ಲಿ ಒಂದು ವಾರ ಪ್ರಾಥಮಿಕ ತರಬೇತಿ ನೀಡಿ, ಅವರ ಕೌಶಲ ವೃದ್ಧಿಗೆ ನೆರವು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಸದುದ್ದೇಶವನ್ನು ಜನರು ಪಡೆದು ಜೀವನ ರೂಪಿಸಿಕೊಳ್ಳಬೇಕು ಎಂದರು.
ಪಿಎಂ ವಿಶ್ವಕರ್ಮ ರಾಜ್ಯ ಸಂಯೋಜಕ ಮಾಲತೇಶ ಛತ್ರದ ಮಾತನಾಡಿ, ತರಬೇತಿ ಅವಧಿಯಲ್ಲಿ ದಿನಕ್ಕೆ 500 ರೂ.ಗಳಂತೆ ತರಬೇತಿ ಭತ್ಯೆ ನೀಡಲಾಗುತ್ತದೆ. ನಂತರ ವೃತ್ತಿ ಸಂಬಂಧಿಸಿದ ಸುಧಾರಿತ ಸಾಮಗ್ರಿ ಖರೀದಿಗೆ 15,000 ರೂ. ಅನುದಾನ ನೀಡಲಾಗುತ್ತದೆ. ತರಬೇತಿ ಮುಗಿದ ಬಳಿಕ ಸರ್ಕಾರ ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಸಾಲ, ಅದನ್ನು ಮರುಪಾವತಿಸಿದ ಬಳಿಕ ಎರಡನೇ ಹಂತದಲ್ಲಿ ಎರಡು ಲಕ್ಷ ರೂ. ಸಾಲವನ್ನು ಶೇ. 5ರ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದರು.
ತರಬೇತಿ ಕೇಂದ್ರ ನಿರ್ದೇಶಕ ಪ್ರಕಾಶ ಬಣಕಾರ, ರವಿಶಂಕರ ಬಾಳಿಕಾಯಿ, ಪುಟ್ಟಣ್ಣ ಪಾಟಿಲ, ಪರಮೇಶಪ್ಪ ಹಲಗೇರಿ, ವೀರಭದ್ರಪ್ಪ ಗಿರಿಮಲ್ಲಪ್ಪನವರ, ಬಸನಗೌಡ ಅಬಲೂರ, ಚನ್ನಬಸಪ್ಪ ಗಿರಿಮಲ್ಲಪ್ಪನವರ, ಕುಮಾರ ಬಣಕಾರ, ರಿಂದೇಶ ಬತ್ತಿಕೊಪ್ಪ, ಮಹಾಬಲೇಶ್ವರ ಗಿರಿಮಲ್ಲಪ್ಪನವರ, ಹನುಮಂತಗೌಡ ಅಜ್ಜಪ್ಪನವರ, ಪರಮೇಶ ಗಿರಿಮಲ್ಲಪ್ಪನವರ, ಶಿವು ಗಿರಿಮಲ್ಲಪ್ಪನವರ, ನಾರಾಯಣ ಬಡಿಗೇರ, ಮೌನೇಶ ಬಡಿಗೇರ ಹಾಗೂ ಫಲಾನುಭವಿಗಳು ಇದ್ದರು.