

ಹಿರೇಕೆರೂರ: ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ರಕ್ತದಾನ ಮಾಡಬೇಕು. ಇದರಿಂದ ಆರೋಗ್ಯ ಉತ್ತಮವಾಗಿರುವುದರ ಜತೆಗೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಒಂದು ಜೀವವನ್ನು ಕಾಪಾಡಿದ ಪುಣ್ಯ ಲಭಿಸುತ್ತದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಪಟ್ಟಣದ ಕೆಸಿಸಿ ಬ್ಯಾಂಕ್ ಎದುರಿಗಿನ ಸಾನು ಪ್ಲಾಟ್ನಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ, ನಮೋ ಭಾರತ್, ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ದಾವಣಗರೆ ಇವರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ದಾವಣಗೆರೆ ಕರ್ನಾಟಕ ಹೀಮೋಫಿಲಿಯ ಸೊಸೈಟಿ ಅಧ್ಯಕ್ಷ ಡಾ. ಸುರೇಶ ಹನಗವಾಡಿ ಮಾತನಾಡಿ, ರಕ್ತದಾನ ಮಾಡುವುದರಿಂದ ಹಿಮೋಫಿಲಿಯಾ ಮತ್ತು ಇತರ ರಕ್ತಸ್ರಾವದ ಕಾಯಿಲೆ ಇರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದರು. ಶಿಬಿರದಲ್ಲಿ ನರೇಂದ್ರ ಮೋದಿ ಅವರ 74 ಅಭಿಮಾನಿಗಳು ರಕ್ತದಾನ ಮಾಡಿದರು.
ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ ಪೂಜಾರ, ತಾಲೂಕು ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ ಗೂಡಗೂರ, ತಾಲೂಕು ಯುವ ಮೊರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡರ, ಪ್ರವೀಣ ಸಣ್ಣಕ್ಕಿ, ರವಿ ಬಡಳ್ಳೆರ, ರವಿಚಂದ್ರ ಅಂಜೆರ, ಸಂಜಿವ ಹಕ್ಕಳ್ಳಿ, ಸುಪ್ರಿದ ಧಾರವಾಡಕರ, ಬಸವರಾಜ ಅರಕೇರಿ, ರುದ್ರೇಶ ಬೇತೂರ, ಶಿವಕುಮಾರ ಪ್ಯಾಟೆರ, ರವಿ ಖಂಡಿಬಾಗೂರ, ಅನಿಲ ಪಾಟೀಲ, ಗುರು ಕಡದಕಟ್ಟಿ, ರವಿ ಕಡೂರ, ನಟರಾಜ ಪಾಟೀಲ, ನವೀನ ಹಾವಳಿ, ನವೀನ ಅಬಲೂರ, ಮಾರುತಿಇದ್ದರು. ನಿಂಗಾಚಾರ ಮಾಯಾಚಾರಿ, ವೀರೇಶ ಗೌಡರ ನಿರ್ವಹಿಸಿದರು.