ಚಿರತೆ ದಾಳಿಯಿಂದ ಗಾಯಗೊಂಡ ಆಕಳ ಕರು

30-HKR CHIRATE DAALI
Published on

ಹಿರೇಕೆರೂರ: ಚಿರತೆ ದಾಳಿಯಿಂದ ಆಕಳು ಕರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ದೂದಿಹಳ್ಳಿ ಗ್ರಾಮದ ಸುಂಕದಕಟ್ಟೆ ಕೆರೆಯ ಬಳಿ ಮಂಗಳವಾರ ಸಂಭವಿಸಿದೆ.
ಗ್ರಾಮದ ಕುಮಾರ ಬಸವಂತಪ್ಪ ಜಗಲೂರ ಎಂಬುವವರ ಆಕಳು ಕರು ಗಾಯಗೊಂಡಿರುವುದು. ಗ್ರಾಮದ ಹೊರವಲಯದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಸುಂಕದಕಟ್ಟೆಯ ಕೆರೆ ದಡದಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಅರಣ್ಯದಿಂದ ಬಂದ ಚಿರತೆ ಕರುವಿನ ಮೇಲೆ ದಾಳಿ ನಡೆಸಿದೆ. ತಕ್ಷಣ ಅಕ್ಕಪಕ್ಕದಲ್ಲಿದ್ದ ರೈತರು, ಚಿರತೆಯನ್ನು ನೋಡಿ ಜೋರಾಗಿ ಗದರಿಸಿ ಚಿರತೆಯನ್ನು ಓಡಿಸಿದ್ದಾರೆ. ಕರುವಿನ ಸ್ಥಿತಿ ಚಿಂತಾಜನಕವಾಗಿದ್ದು, ಹಿರೇಕೆರೂರಿನ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು, ರೈತರು ಭಯಭೀತರಾಗಿದ್ದಾರೆ. ಕೂಡಲೆ ಚಿರತೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

ಗ್ರಾಮದ ಸುಂಕದಕಟ್ಟೆ ಕೆರೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಆಗಾಗ ಅರಣ್ಯದಿಂದ ಜಮೀನಿನ ಬಳಿ ಬರುತ್ತವೆ. ಗ್ರಾಮಸ್ಥರು ಚಿರತೆ ದಾಳಿಯ ಬಗ್ಗೆ ದೂರು ನೀಡಿದ್ದು, ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಲಾಗುವುದು. ಗಸ್ತು ತಿರುಗಲು ಕೂಡಲೆ ಅರಣ್ಯ ಸಿಬ್ಬಂದಿ ನೇಮಿಸಲಾಗುವುದು. ಕರುವಿನ ಬಗ್ಗೆ ರೈತರು ಗ್ರಾಪಂ ಕಚೇರಿ ಮೂಲಕ ನಮಗೆ ದೂರು ನೀಡಿದರೆ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು..ಬಿ. ಮೊಹಿತೆ ಉಪವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net