ಹಿರೇಕಲ್ಮಠದ ಚನ್ನಪ್ಪ ಸ್ವಾಮಿ ರಥೋತ್ಸವ ನಾಳೆ

Hirekalmath, Channappa, Rathotsava, Honnali,
ಚನ್ನಪ್ಪ ಸ್ವಾಮಿ ರಥೋತ್ಸವ ಅಂಗವಾಗಿ ಹೊನ್ನಾಳಿಯ ಹಿರೇಕಲ್ಮಠ ವಿದ್ಯುದ್ದೀಪಗಳಿಂದ ಅಲಂಕಾರಗೊಂಡಿರುವುದು.
Published on

ಹೊನ್ನಾಳಿ: ಪಟ್ಟಣದ ಹಿರೇಕಲ್ಮಠದಲ್ಲಿ ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಮಂಗಳವಾರ ಚನ್ನಪ್ಪ ಸ್ವಾಮಿ ರಥೋತ್ಸವ ನಡೆಯಲಿದೆ.

ಭಾನುವಾರ ವಟುಗಳಿಗೆ ದೀಕ್ಷೆ ನಡೆದರೆ, ಸೋಮವಾರ ಶ್ರೀಮಠದ ಆವರಣದಲ್ಲಿರುವ ಕರ್ತೃಗದ್ದುಗೆಗಳಿಗೆ ಪೂಜೆ ಸಲ್ಲಿಸಲಾಯಿತು. ಶ್ರೀ ವೀರಭದ್ರೇಶ್ವರ ಹಾಗೂ ಚನ್ನಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಂಗಳವಾರ ಬೆಳಗ್ಗೆ ಶ್ರೀಮಠದ ಆವರಣದಲ್ಲಿ ವೀರಭದ್ರೇಶ್ವರ ಕೆಂಡಾರ್ಚನೆ ಏರ್ಪಡಿಸಲಾಗಿದೆ. ಬಳಿಕ ಹಿರೇಕಲ್ಮಠ ವೃತ್ತದಿಂದ ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಚನ್ನಪ್ಪ ಸ್ವಾಮಿ ರಥೋತ್ಸವ ನಡೆಯಲಿದೆ.

ತೇರಿನಲ್ಲಿ ಲಿಂ.ಚಂದ್ರಶೇಖರ್ ಶಿವಾಚಾರ್ಯ ಶ್ರೀ ಭಾವಚಿತ್ರ ಭಾವಚಿತ್ರ ಹಾಗೂ ಡಾ.ಒಡೆಯರ್ ಚನ್ನಮಲ್ಲಿಕಾಜುನ ಶಿವಾಚಾರ್ಯ ಶ್ರೀಗಳು ಆರೂಢರಾಗಲಿದ್ದಾರೆ.

ರಥೋತ್ಸವದ ಅಂಗವಾಗಿ ಹಿರೇಕಲ್ಮಠದ ಆವರಣ ಹಾಗೂ ಎಲ್ಲ ದೇವಸ್ಥಾನಗಳು ವಿದ್ಯುದ್ದೀಪ, ತಳಿರು, ತೋರಣಗಳಿಂದ ಅಲಂಕಾರಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net