ಸನ್ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ

13 HNL
Published on

ಹೊನ್ನಾಳಿ: ರೇಣುಕಾಚಾರ್ಯರ ಉಪದೇಶ ಹಾಗೂ ಸಂದೇಶಗಳನ್ನು ಜಗತ್ತಿಗೆ ಸಾರುವ ಜತೆಗೆ ನಾವು ಅದರಂತೆ ನಡೆದುಕೊಳ್ಳೋಣ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಬುಧವಾರ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಬೇಡಜಂಗಮ ಸೇವಾ ಸಂಘ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

ರೇಣುಕಾಚಾರ್ಯರು ದಶಧರ್ಮ ಸೂತ್ರಗಳನ್ನು ನೀಡಿದ್ದು, ಅವುಗಳನ್ನು ಪಾಲಿಸಿದರೆ ಎಲ್ಲ ವರ್ಗ ಜನ ತಮ್ಮ ಬದುಕಿನುದ್ದಕ್ಕೂ ಸುಖ, ಶಾಂತಿಯಿಂದ ಇರಬಹುದು. ಭಾರತೀಯ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಗಳು ನಮ್ಮ ಧರ್ಮದಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ನಾವು ಧರ್ಮದ ಮಾರ್ಗದಲ್ಲಿ ನಡೆಯಬೇಕು. ಮಾತೃ, ಪಿತೃ ಮತ್ತು ಆಚಾರ್ಯರನ್ನು ಗೌರವಿಸುವ ಹಾಗೂ ಪೂಜಿಸುವ ಏಕೈಕ ರಾಷ್ಟ್ರ ನಮ್ಮದು ಎಂದು ತಿಳಿಸಿದರು.

ಬೇಡ ಜಂಗಮ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಂ. ಪಂಚಾಕ್ಷರಯ್ಯ ಮಾತನಾಡಿ, ಧಾರ್ವಿುಕ ಕಾರ್ಯಕ್ರಮಗಳನ್ನು ಒಟ್ಟಾಗಿ ಸೇರಿ ಆಚರಿಸಿದರೆ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.

ಶಿಕ್ಷಕ ಕೊಟ್ರೇಶ್, ಪುರಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್ ಹಾಗೂ ಕುಮಾರಸ್ವಾಮಿ ಮಾತನಾಡಿದರು.

ಬೃಹನ್ಮಠ ರಾಂಪುರದ ಶಿವಕುಮಾರ ಸ್ವಾಮೀಜಿ, ಬೃಹನ್ಮಠ ಗೋವಿನಕೋವಿಯ ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮೀಜಿ ಉಪಸ್ಥಿತರಿದ್ದರು. ಪತ್ರಕರ್ತ ಎಂ.ಎಸ್. ಹೊಳೆಮಠ ಶಾಸ್ತ್ರಿ ತಂಡವರಿಂದ ವೇದಘೊಷ ನಡೆಯಿತು.

ರೇಣುಕಾಚಾರ್ಯ ಅವರ ಬೃಹತ್ ಭಾವಚಿತ್ರಕ್ಕೆ ಹಿರೇಕಲ್ಮಠದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಕನಕದಾಸ ರಂಗಮಂದಿರಕ್ಕೆ ತರಲಾಯಿತು.

ತಹಸೀಲ್ದಾರ್ ಪಟ್ಟರಾಜಗೌಡ, ಬೇಡ ಜಂಗಮ ಸಮಾಜದ ಮುಖಂಡರಾದ ಗಂಗಾಧರಯ್ಯ, ಎನ್.ಕೆ. ವಿಶ್ವಾರಾಧ್ಯ ಕೋಹಳ್ಳಿ ಮಠ, ಕೆ.ಎಂ. ಪರಮೇಶ್ವರಯ್ಯ, ಕೆ.ವಿ. ಬಸವರಾಜಯ್ಯ ಮೆಂ. ರುದ್ರಯ್ಯ, ನಾಗರಾಜಯ್ಯ, ರುದ್ರೇಶ್, ಶಿಕ್ಷಕ ಕರಿಬಸಯ್ಯ, ಡಾ. ಚಂದ್ರಶೇಖರ್ ಸಾಲಿಮಠ, ಗುರುಪಾದಯ್ಯ ಮಠದ್, ಪ್ರೀತಿ ಭರತ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net