

ತ್ಯಾಗರ್ತಿ: ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷರಾಗಿ ಬಿ.ನಾಗರಾಜ್, ಉಪಾಧ್ಯಕ್ಷರಾಗಿ ಸುಜಾತಾ ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು. ಕಳೆದ ಬಾರಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ನಾಗರಾಜ್ ಈ ಬಾರಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲ ಪಡೆದು ಅಽಕಾರಕ್ಕೆ ಏರಿz್ದÁರೆ. ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿದ್ದು ಕಳೆದ ಬಾರಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಆಂತರಿಕ ಒಪ್ಪಂದಕ್ಕೆ ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು ಕೈಕೊಟ್ಟ ಹಿನ್ನೆಲೆಯಲ್ಲಿ ನಾಗರಾಜ್ ಹಾಗೂ ಸುಜಾತಾ ಲೋಕೇಶ್ ಸೇರಿದಂತೆ ಇತರರು ಕಾಂಗ್ರೆಸ್ ಬೆಂಬಲಿತ ಪಾರ್ವತಮ್ಮ ಅಧ್ಯಕ್ಷರಾಗಲು ಬೆಂಬಲ ನೀಡಿದ್ದರು. ಈಗ ಅಧ್ಯಕ್ಷ ಸ್ಥಾನಕ್ಕೆ ಸ್ಪಽðಸಲು ಬಿಜೆಪಿ ಬಲ ಇಲ್ಲದಿದ್ದರೂ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ನಾಗರಾಜï ಅಽಕಾರಕ್ಕೆ ಏರಿz್ದÁರೆ. ಉಪಾಧ್ಯಕ್ಷೆ ಸುಜಾತಾ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿದ್ದರು. ತಾಪಂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್ ಚುನಾವಣೆ ಪ್ರಕ್ರಿಯೆ ನಡೆಸಿದರು. ಸದಸ್ಯರಾದ ವೀಣಾ, ಎಚ್.ಆರ್.ಪ್ರಶಾಂತ್, ಗಾಯತ್ರಿ, ಪಾರ್ವತಮ್ಮ, ಚಂದ್ರಕಲಾ, ಎಚ್.ಶಿವಪ್ಪ, ಪುನೀತ್‌ರಾಜ್ ಕಣ್ಣೂರು, ಸೋಮಶೇಖರ ಕುಣಿಕೇರಿ, ಮುಖಂಡರಾದ ಯೋಗೇಶ್ ಹುತ್ತಾದಿಂಬ, ಜಗದೀಶ್ ಸಂಪಳ್ಳಿ, ಬೆನಕಪ್ಪ, ಅಶೋಕ್ ಇತರರಿದ್ದರು.