ನೊಂದ ಕುಟುಂಬಕ್ಕೆ ನೆರವಿನ ಹಸ್ತ

VJP 17-3
Published on

ವಿಜಯಪುರ: ವಿದ್ಯುತ್ ಅವಘಡದಿಂದಾಗಿ ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜ ಸೇವಕರೊಬ್ಬರು ಮಾನವೀಯ ಕಳಕಳಿ ಮೆರೆದಿದ್ದಾರೆ.
ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದ ಡಾ.ಸಿದ್ದು ಎಸ್. ಪರಗೊಂಡ ಸೋಮವಾರ ನೆರವು ನೀಡಿದವರು. ಅದೇ ಗ್ರಾಮದ ಚಂದು ನಾಯ್ಕೋಡಿ ಅವರ ಮನೆ ಕೆಲ ದಿನದ ಹಿಂದೆ ಅಗ್ನಿಗಾಹುತಿಯಾಗಿತ್ತು. ಮನೆಯಲ್ಲಿದ್ದ ಹನ್ನೊಂದು ಚೀಲ ಜೋಳ, ಎರಡು ಚೀಲ ಗೋಧಿ, ಅಕ್ಕಿ ಹಾಗೂ 25 ಸಾವಿರ ರೂ. ನಗದು ಮತ್ತು ಅರ್ಧ ಗ್ರಾಂ ಬಂಗಾರ ನಾಶವಾಗಿತ್ತು. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಈ ಕುಟುಂಬಕ್ಕೆ 11 ಸಾವಿರ ರೂ. ಸಹಾಯ ಧನ ನೀಡಿದ ಡಾ.ಪರಗೊಂಡ ಅವರು ಹೆಚ್ಚಿನ ನೆರವಿಗಾಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಹಿರಿಯರಾದ ಗುರನಗೌಡ ಪೊಲೀಸ್‌ಪಾಟೀಲ, ಶ್ರೀಶೈಲಗೌಡ ಬಿರಾದಾರ, ಪ್ರವೀಣ ಉಪ್ಪಿನ್, ಸೋಮಶೇಖರ ಪಾತಳಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net