ಹಿರೇಬಾಗೇವಾಡಿ ಶಾಲಾ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

12hrbd2-Web
ಶಾಲೆಯಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಿ ಸರ್ಕಾರಿ ಶಾಲೆಯ ವತಿಯಿಂದ ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಅಡಿವೇಶ ಇಟಗಿ, ಆನಂದ ಪಾಟೀಲ, ಇತರರಿದ್ದರು.
Published on

ಹಿರೇಬಾಗೇವಾಡಿ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶಾಲಾಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷೆ ಸ್ವಾತಿ ಇಟಗಿ ಹಾಗೂ ಉಪಾಧ್ಯಕ್ಷೆ ನಾಝರಿನ್‌ಬಾನು ಕರಿದಾವಲ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಭಾಮಂಟಪ ನಿರ್ಮಾಣ, ಶೌಚಗೃಹ ದುರಸ್ತಿ ಹಾಗೂ ಶಾಲೆಯ ಅವರಣಕ್ಕೆ ಪೇವರ್ಸ್ ಅಳವಡಿಕೆ ಸೇರಿ ಅಗತ್ಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ಕಾಡಾ ಮಾಜಿ ಅಧ್ಯಕ್ಷ ಅಡಿವೇಶ ಇಟಗಿ, ಗ್ರಾಪಂ ಸದಸ್ಯರಾದ ಆನಂದ ಪಾಟೀಲ, ಸದ್ದಾಂ ನದ್ಾ, ಸಂಜಯ ದೇಸಾಯಿ, ಎಸ್‌ಡಿಎಂಸಿ ಸದಸ್ಯರಾದ ಶಿವಪ್ಪ ತೋಟಗಿ, ನಾಗರಾಜ ಬೆಟಗೇರಿ, ಸುಭಾಶ ಬಾನಿ, ಅನಸೂಯ ಬಡಿಗೇರ, ಅಡಿವೆಪ್ಪ ತೋಟಗಿ, ಗಂಗಾಧರ ಅಗಸಿಮನಿ, ಎಂ.ಎಂ. ಕಿತ್ತೂರ, ಶೈಲಾ ಕಡೇಮನಿ, ಸಿ.ವಿ. ಹುಲಿಕಟ್ಟಿ, ಎಸ್.ಯು. ಪಾಶ್ಚಾಪುರ, ಡಿ.ಆರ್. ಅಂಕಲಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net