

ಹಿರೇಬಾಗೇವಾಡಿ: ಇಲ್ಲಿನ ಗೌಶಿಯಾ ಖಾದ್ರಿ ದರ್ಗಾದ ಪೀರ್ (ಧರ್ಮ ಗುರು) ಹಜರತ್ ಸಯ್ಯದ್ ಆದಂಶಾ ಅಬ್ದುಲ್ ರೆಹಮಾನ್‌ಶಾ ಖಾದ್ರಿ (69) ಸೋಮವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು, ಸಹೋದರ ಹಾಗೂ ದರ್ಗಾದ ಕಿರಿಯ ಅಜ್ಜ ಅಶ್ರ್ಅಲಿ ಖಾದ್ರಿ, ಪತ್ನಿ, 5 ಪುತ್ರಿಯರು ಹಾಗೂ ಅಪಾರ ಭಕ್ತ ಸಮೂಹ ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ 5 ಗಂಟೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಫಾರ್ಥಿವ ಶರೀರದ ಮೆರವಣಿಗೆ ನಡೆಸಿ, ಇಸ್ಲಾಂ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಶಾಸಕ ಎಸ್.ಸಿ. ಮಾಳಗಿ, ರಾಣಿ ಶುಗರ್ ಸಕ್ಕರೆ ಕಾರ್ಖಾನೆ ಅಧ್ಯಕ್ಷ ನಾಸೀರ್ ಬಾಗವಾನ್, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಜಿಪಂ ಸದಸ್ಯ ಶಂಕರಗೌಡ ಪಾಟೀಲ, ಆನಂದಸ್ವಾಮಿ ಗಡದೇವರಮಠ, ಬಸವರಾಜ ಮೇಳೇದ ಇತರರು ಅಂತಿಮ ದರ್ಶನ ಪಡೆದರು.