

ಯಲಬುರ್ಗಾ: ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶಾಂತಮ್ಮ ಹನುಮಂತಪ್ಪ ವಾದಿ, ಉಪಾಧ್ಯಕ್ಷರಾಗಿ ಲಕ್ಷ್ಮೀದೇವಿ ದೇವರಾಜ ಮನ್ನಾಪುರ ಸೋಮವಾರ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ಹನುಮಂತಪ್ಪ ವಾದಿ, ಮಲ್ಲಮ್ಮ ಬಸವರಾಜ ಮನ್ನಾಪುರ ನಾಮಪತ್ರ ಸಲ್ಲಿಸಿದ್ದರು. ಶಾಂತಮ್ಮ ವಾದಿ 13 ಮತ ಪಡೆದು ಗೆಲುವು ಸಾಧಿಸಿದರು. ಮಲ್ಲಮ್ಮ 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ದೇವರಾಜ ಮನ್ನಾಪುರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ತಿಳಿಸಿದರು. ಒಟ್ಟು 21 ಸದಸ್ಯರ ಪೈಕಿ ಒಬ್ಬರು ಗೈರಾಗಿದ್ದರು. ಸಹಾಯಕ ಚುನಾವಣಾಧಿಕಾರಿ ಸಮೀರಕುಮಾರ, ಪಿಡಿಒ ಸೋಮಪ್ಪ ಪೂಜಾರ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಗೌರೀಶ ವಾದಿ, ರವಿ ಭಾವಿಕಟ್ಟಿ, ಲೋಕನಗೌಡ ಪಾಟೀಲ್, ಮಹಾಂತೇಶ ವಾದಿ, ಪ್ರಕಾಶ ಗೌಡ್ರ, ಹನುಮೇಶ ಮೂಲಿ, ಹನುಮಂತಪ್ಪ ಹರಿಜನ ಇತರರಿದ್ದರು.