ಹಿರಣ್ಯಕೇಶಿ ಸೊಸೈಟಿಗೆ ಕವಟಗಿಮಠ ಅಧ್ಯಕ್ಷ

13CKD6-web
ಚಿಕ್ಕೋಡಿಯಲ್ಲಿ ಸಂಕೇಶ್ವರ ಹಿರಣ್ಯಕೇಶಿ ಕೋ-ಆಪ್ ಟ್ರಾನ್ಸ್‌ಪೋರ್ಟ್ ಸೊಸೈಟಿ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಭಾತೆ, ಉದಯಕುಮಾರ ದೇಸಾಯಿ, ಅಶೋಕ ಬೈರುಮಾಳಿ, ಬಸವರಾಜ ಭಾತೆ, ಸುಜಾತಾ ಖೋತ, ಶ್ರೀಕಾಂತ ಚೆನ್ನವರ ಇತರರಿದ್ದರು.
Published on

ಚಿಕ್ಕೋಡಿ: ಸಂಕೇಶ್ವರದ ಹಿರಣ್ಯಕೇಶಿ ಕೋ-ಆಪ್ ಟ್ರಾನ್ಸ್‌ಪೋರ್ಟ್ ಸೊಸೈಟಿ ಆಡಳಿತ ಮಂಡಳಿಗೆ ಪಟ್ಟಣದಲ್ಲಿ ಶನಿವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಎಲ್ಲ 15 ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಮಹಾಂತೇಶ ಭಾತೆ,ನಿರ್ದೇಶಕರಾಗಿ ಉದಯಕುಮಾರ ದೇಸಾಯಿ, ಅಶೋಕ ಬೈರುಮಾಳಿ,ಬಸವರಾಜ ಭಾತೆ, ಶ್ರೀಕಾಂತ ಚೆನ್ನವರ, ರಾಜೀವ ಪಾಟೀಲ, ಕಲಗೌಡ ಪಾಟೀಲ, ಸಚಿನ ಹೆಬ್ಬಾಳಿ, ಅಕ್ರಂ ಅರಕಾಟೆ, ಶಾಂತಕ್ಕ ಕವಟಗಿಮಠ, ಸುಜಾತಾ ಖೋತ, ಗಣಪತಿ ಕಾಂಬಳೆ, ನಾಗರಾಜ ಮೇದಾರ, ನಿಖಿಲ ಕತ್ತಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಎಂದು ಚುನಾವಣಾಧಿಕಾರಿ ಶಶಿಕಲಾ ಪಾಟೀಲ ತಿಳಿಸಿದ್ದಾರೆ. ಆಡಳಿತ ಮಂಡಳಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಂತೇಶ ಕವಟಗಿಮಠ, ಹಲವು ಸಹಕಾರಿ ಸಂಘಗಳ ಬೆಳವಣಿಗೆಗೆ ಬೆಳಗಾವಿ ಜಿಲ್ಲೆ ತನ್ನದೆಯಾದ ಕೊಡುಗೆ ನೀಡಿದೆ. ಆರೋಗ್ಯ, ವಿದ್ಯುತ್, ಪೆಟ್ರೋಲ್ ಬಂಕ್ ಸೇರಿ ಹಲವು ಸೇವೆಗಳನ್ನು ಸಂಘಗಳು ನೀಡುತ್ತಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net