ಹಿಂಗಾರು ಹಂಗಾಮಿನ ಬೀಜ ವಿತರಣೆಗೆ ಚಾಲನೆ

Hingaru, Nalatwad, Congress, Subsidy, Seed, Fertilizer,
ನಾಲತವಾಡ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಬೀಜ, ತಾಡಪಾಲುಗಳ ವಿತರಣೆ ಕಾರ್ಯಕ್ಕೆ ಶಾಸಕ ಸಿ.ಎಸ್.ನಾಡಗೌಡ ಚಾಲನೆ ನೀಡಿದರು. ಸುರೇಶ ಬಾವಿಕಟ್ಟಿ, ಅಶೋಕ ಕಾಂಬ್ಳೆ, ಜಗದೀಶ ಡೇರೇದ, ವಿಜಯ ಕ್ಷತ್ರಿ ಇತರರಿದ್ದರು.
Published on

ನಾಲತವಾಡ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ರೈತರಿಗೆ ಒದಗಿಸಬೇಕಾದ ಸಬ್ಸಿಡಿ ಸೌಲಭ್ಯದ ಬೀಜ, ಗೊಬ್ಬರ, ತಾಡಪಾಲು ಹಾಗೂ ಸಿಂಪಡಣೆ ಇಂಜಿನ್‌ಗಳ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದು, ವಿರೋಧಿಗಳ ಅಪಸ್ವರಕ್ಕೆ ಕಿವಿಗೊಡಬೇಡಿ ಎಂದು ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ- ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಇಲ್ಲಿಯ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ 2024-25ನೇ ಸಾಲಿನ ಹಿಂಗಾರು ಹಂಗಾಮಿನ ಎಸ್ಸಿ ಹಾಗೂ ಎಸ್ಟಿ ವರ್ಗದ ಬೀಜ, ತಾಡಪಾಲುಗಳ ವಿತರಣೆಗೆ ಚಾಲನೆ ನೀಡಿ ಗುರುವಾರ ಅವರು ಮಾತನಾಡಿದರು.

ಕಳೆದ 2 ವರ್ಷಗಳಿಂದ ಮುದ್ದೇಬಿಹಾಳ ತಾಲೂಕಿನಲ್ಲಿ ರೈತರಿಗೆ ಅವಶ್ಯಕ ಸೌಲಭ್ಯಗಳು ಸಿಗುತ್ತಿವೆ. ಈ ಹಂಗಾಮಿಗೆ ಬೇಕಾದ ಕಡಲೆ, ಜೋಳ, ಗೊಬ್ಬರ ದಾಸ್ತಾನು ಇದ್ದು ಬೀಜಗಳ ವಿತರಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಯದಂತೆ ನಮ್ಮ ಸರ್ಕಾರ ನೋಡಿಕೊಳ್ಳುತ್ತಿದೆ. ಈ ಭಾಗದಲ್ಲಿ ನೀರಾವರಿಗೆ ಆದ್ಯತೆ ಕೊಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಬಾವಿಕಟ್ಟಿ, ಸ್ಥಳೀಯ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಅಶೋಕ ಕಾಂಬ್ಳೆ ಮಾತನಾಡಿದರು. ಪ.ಪಂ ಸದಸ್ಯ- ಸಮಾಜ ಸೇವಕ ಜಗದೀಶ ಡೇರೇದ, ಗಣಕಯಂತ್ರ ಆಪರೇಟರ್ ವಿಜಯ ಕ್ಷತ್ರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net