ಹಿಂದುಳಿದವರ ಮೇಲೆತ್ತುವುದೇ ಹಿಂದುತ್ವ: ನಟ ಶಿವರಾಜ್‌ಕುಮಾರ್

Actor Shivaraj kumar
ನಟ ಶಿವರಾಜ್‌ಕುಮಾರ್
Published on

ಶಿವಮೊಗ್ಗ: ಸಮಾಜದ ಎಲ್ಲ ಸ್ತರಗಳಲ್ಲಿ ಹಿಂದುಳಿದವರನ್ನು ಮೇಲೆತ್ತುವುದೇ ನಿಜವಾದ ಹಿಂದುತ್ವ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.

ಹಿಂದುತ್ವಕ್ಕೆ ನಾನಾ ವ್ಯಾಖ್ಯಾನಗಳೇ ಇದ್ದರೂ ಕರ್ನಾಟಕದಲ್ಲಿ ಹಿಂದುತ್ವ ಎನ್ನುವುದು ಯಾರೆಲ್ಲ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೋ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಮೇಲೆತ್ತುವುದಾಗಿ ಎಂದರು.
ಯಾವುದೇ ಕ್ಷೇತ್ರವಿದ್ದರೂ ಆರೋಗ್ಯಕರ ಸ್ಪರ್ಧೆ ಇರಬೇಕು. ಗೀತಾ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಬೇರೆಯವರೂ ಸ್ಪರ್ಧೆ ಮಾಡಿದ್ದಾರೆ. ಇಬ್ಬರಲ್ಲಿ ಯಾರಾದರೊಬ್ಬರು ಗೆಲ್ಲಬೇಕು. ಇಬ್ಬರ ನಡುವೆ ಸ್ಪರ್ಧೆ ಟೀಕೆ, ಟಿಪ್ಪಣಿಗಳಿಗೆ ಆಸ್ಪದ ನೀಡದೇ ಆರೋಗ್ಯಕರವಾಗಿರಬೇಕು. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಕಾಣಿಸುತ್ತಿದೆ. ಜನರು ಪ್ರೀತಿ, ವಿಶ್ವಾಸ ತೋರಿಸುತ್ತಿದ್ದು ಜನರ ಪ್ರೀತಿಯನ್ನು ಫುಲ್ಫಿಲ್ ಮಾಡಬೇಕು ಅಷ್ಟೇ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net