ಅಂಜನಾದ್ರೀಶ ಶೂರ ಸೇನೆ ಪ್ರಶಸ್ತಿ

h ishwarappa
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಶ್ರೀ ವಿಜಯ ವಿಠ್ಠಲ ಸೇವಾ ಸಮಿತಿಯು 2023-24ನೇ ಸಾಲಿನ ಅಂಜನಾದ್ರೀಶ ಶೂರ ಸೇನೆ ಪ್ರಶಸ್ತಿಗೆ ಹುಬ್ಬಳ್ಳಿಯ ಹಿಂದುಸ್ತಾನಿ ಗಾಯಕ ಎಚ್. ಈಶ್ವರಪ್ಪ ಅವರನ್ನು ಆಯ್ಕೆ ಮಾಡಿದೆ.

ಮೇ 26ರಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಸಭಾಂಗಣದಲ್ಲಿ ಆಯೋಜಿಸಿರುವ ಹರಿದಾಸ ಮಿಲನ ದಾಸೋಪಾಸನ ಹಾಗೂ ಚಿಪ್ಪಗಿರಿಯ ತಪೋಮೂರ್ತಿ ವಿಜಯದಾಸರ ಬಳಗ ಸಂಘಟನೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಪ್ರಶಸ್ತಿ ಪ್ರದಾನ ಮಾಡುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net