

ಹುಬ್ಬಳ್ಳಿ : ಗಾನ ಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ಷಮತಾ ಸೇವಾ ಸಂಸ್ಥೆ, ಸ್ವರ್ಣ ಸಮೂಹ ಸಂಸ್ಥೆ, ಕೆವಿಜಿ ಬ್ಯಾಂಕ್ ಹಾಗೂ ಎಲ್ಐಸಿ ಆಶ್ರಯದಲ್ಲಿ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ‘ಸಂಗೀತ ಮಹೋತ್ಸವ-24’ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನ. 16ರಂದು ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಏರ್ಪಡಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು. ಶಾಸಕ ಮಹೇಶ ಟೆಂಗಿನಕಾಯಿ, ಕ್ಷಮತಾ ಸಂಚಾಲಕ ಗೋವಿಂದ ಜೋಶಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಬಿಜೆಪಿ ಮುಖಂಡ ರಂಗಾ ಬದ್ದಿ ಅತಿಥಿಗಳಾಗಿ ಪಾಲ್ಗೊಳ್ಳುವರು.
ಹಿಂದುಸ್ತಾನಿ ಗಾಯಕ ಪಂ. ಜಯತೀರ್ಥ ಮೇವುಂಡಿ, ಉಸ್ತಾದ ರಫೀಕ ಖಾನ್, ಪಂ. ಬಾಲಚಂದ್ರ ನಾಕೋಡ, ಉಸ್ತಾದ ಶಫೀಕ ಖಾನ್, ಪಂ. ರಾಜೇಂದ್ರ ನಾಕೋಡ, ನಿರಂಜನ ಆಲೆ, ಡಾ. ಶ್ರೀಹರಿ ದಿಗ್ಗಾವಿ, ವಿಭಾ ಹೆಗಡೆ, ಸತೀಶ ಭಟ್ಟ ಅವರು ಗಾಯನ ಪ್ರಸ್ತುತ ಪಡಿಸುವರು.
ಉಚಿತ ಪ್ರವೇಶವಿದು, ಸಂಗೀತಾಸಕ್ತರು ಪಾಲ್ಗೊಳ್ಳುವಂತೆ ಪಂ.ಬಾಲಚಂದ್ರ ನಾಕೋಡ ಕೋರಿದ್ದಾರೆ.