ಮೈಸೂರಿನಲ್ಲಿ ನಾಳೆ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ

Renuka Nakod photo2
Published on


ಮೈಸೂರು:
ನಗರದ ಸ್ವರಸಂಕುಲ ಸಂಗೀತ ಸಭಾ ವತಿಯಿಂದ ಸೆ.11 ರ ಸಂಜೆ 5ಕ್ಕೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಹಿಂದುಸ್ತಾನಿ ಸಂಗೀತ ಗಾಯನ ಮತ್ತು ತಬಲಾ ಜುಗಲಬಂದಿ ಆಯೋಜಿಸಲಾಗಿದೆ.


ಮೊದಲಿಗೆ ವಿದುಷಿ ರೇಣುಕಾ ನಾಕೋಡ್ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ನಂತರ ಪಂಡಿತ್ ರಘುನಾಥ ನಾಕೋಡ್ ಹಾಗೂ ಪಂಡಿತ್ ರವಿಕಿರಣ ನಾಕೋಡ್ ಅವರು ತಬಲಾ ಜುಗಲಬಂದಿ ಪ್ರಸ್ತುತ ಪಡಿಸಲಿದ್ದಾರೆ. ಈ ಎರಡೂ ಕಾರ್ಯಕ್ರಮಗಳಿಗೆ ಪಂಡಿತ್ ಶಂಕರ್ ಕಬಾಡಿ ಪಿಟೀಲು ಮತ್ತು ಪಂಡಿತ್ ವೀರಭದ್ರಯ್ಯ ಹಿರೇಮಠ ಹಾರ್ಮೋನಿಯಂ ಸಹಕಾರ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net