ಸ್ವರ ಸಂಕುಲ ಸಂಗೀತ ಸಭಾದಿಂದ ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ

ashvin baliga
Published on

ಸ್ವರಸಂಕುಲ ಸಂಗೀತ ಸಭಾ ವತಿಯಿಂದ ನಾರಾಯಣಶಾಸ್ತ್ರಿ ರಸ್ತೆಯ ಬಿಡಾರಂ ಕೃಷ್ಣಪ್ಪ ರಾಮಮಂದಿರದಲ್ಲಿ ಫೆ.22 ರಂದು ಸಂಜೆ 6 ಗಂಟೆಗೆ ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅನಿವಾಸಿ ಭಾರತೀಯರಾದ ಅಶ್ವಿನ್ ಬಾಳಿಗಾ ಹಾಡಲಿದ್ದಾರೆ. ಹಾರ್ಮೋನಿಯಂನಲ್ಲಿ ವೀರಭದ್ರಯ್ಯ ಹಿರೇಮಠ್, ತಬಲಾದಲ್ಲಿ ರಮೇಶ್ ಧನ್ನೂರ್ ಸಹಕರಿಸಲಿದ್ದಾರೆ.

ಅಶ್ವಿನ್ ಬಾಳಿಗಾ ಅವರು ಮೂಲತಃ ಬೆಂಗಳೂರಿನವರೇ ಆದರೂ ಯುಎಸ್‌ನಲ್ಲಿ ಬದುಕು ಕಟ್ಟಿಕೊಂಡು ಅಲ್ಲಿಯೇ ನೆಲೆನಿಂತು ಹಿಂದುಸ್ತಾನಿ ಶಾಸ್ತ್ರೀಯ ಗಾಯಕರಾಗಿ ಮತ್ತು ಶಿಕ್ಷಣ ತಜ್ಞರಾಗಿ ಪ್ರಸಿದ್ಧಿ ಪಡೆದಿದ್ದಾರೆ. ಖ್ಯಾತ ಗಾಯಕ ಮಹೇಶ್ ಕಾಳೆ ಅವರಿಂದ ಆರಂಭಿಕ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತು, ಮುಂದೆ ಹೆಚ್ಚಿನ ಮಾರ್ಗದರ್ಶನವನ್ನು ಪಂ.ಮಿಲಿಂದ್ ಚಿತ್ತಾಲ್ ಅವರಿಂದ ಪಡೆದು, ಇಂದು ಅವರ ಹಿರಿಯ ಶಿಷ್ಯರಲ್ಲಿ ಇವರೂ ಒಬ್ಬರಾಗಿದ್ದಾರೆ. ಈಗಾಗಲೇ ಯುಎಸ್ ಮತ್ತು ಭಾರತದಾದ್ಯಂತ ಅನೇಕ ಸ್ಥಳಗಳಲ್ಲಿನ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆ ಪಡೆದಿದ್ದಾರೆ.

ತಮ್ಮ ಪರಿಕಲ್ಪನೆಯ ವಿಶೇಷ ಪ್ರಯೋಗವನ್ನು ಮಿಳಿತಗೊಳಿಸಿ ಪ್ರಪಂಚದಲ್ಲೇ ಮೊದಲ ಬಾರಿಗೆ ಹಿಂದುಸ್ತಾನಿಯಲ್ಲಿರುವ ವಿಸ್ತೃತವಾದ ಆಲಾಪ್, ಆವರ್ತನ ಹಾಗೂ ನಿರ್ದಿಷ್ಟ ಬೋಲ್ ಶಬ್ದಗಳ ತರಂಗಗಳ ಮೂಲಕ ರಾಗ ಬಾತ್ ಎಂಬ ಕಾರ್ಯಕ್ರಮ ಪ್ರದರ್ಶಿಸಿ, ಧ್ಯಾನದ ವಿಭಿನ್ನ ಅನುಭವ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net