

ಶ್ರೀ ಗುರುರಾಘವೇಂದ್ರ ಸ್ವಾಮಿಗಳವರ 352ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ನಂ.29, 3ನೇ ಬ್ಲಾಕ್, ಸೋಮನಾಥನಗರದಲ್ಲಿ ಸೆ.1 ಮತ್ತು 2ರಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
1ರಂದು ಸಂಜೆ 7 ಗಂಟೆಗೆ ಡಾ.ಪಂಡಿತ್ ಪ್ರಸನ್ನ ಮಾಧವ ಗುಡಿ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಅವರಿಗೆ ವೀರಭದ್ರಯ್ಯ ಹಿರೇಮಠ(ಹಾರ್ಮೋನಿಯಂ), ಭೀಮಾಶಂಕರ್ ಬಿದನೂರು(ತಬಲಾ) ಸಾಥ್ ನೀಡಲಿದ್ದಾರೆ. 2ರಂದು ಸಂಜೆ 6 ಗಂಟೆಗೆ ವಿದುಷಿ ಎಂ.ಎಸ್.ಕೀರ್ತನಾ ಮತ್ತು ತಂಡದಿಂದ ದೇವರ ನಾಮಗಳು ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ಪಂಡಿತ್ ಕುಮಾರ್ ಮರಡೂರ ಅವರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಅವರಿಗೆ ಶ್ರೀರಾಮ ಭಟ್(ಹಾರ್ಮೋನಿಯಂ), ರಾಜೇಂದ್ರ ನಾಕೋಡ(ತಬಲಾ) ಸಹಕಾರ ನೀಡಲಿದ್ದಾರೆ.