ಹಿಂದುಗಳು ಮತಾಂತರಗೊಳ್ಳದೆ ಆರೋಗ್ಯವಂತ ಸಮಾಜ ನಿರ್ಮಿಸಿ

FotoJet 111
Published on

ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸಾಮೀಜಿ ಕರೆ

ಮುಳಬಾಗಿಲು: ಹಿಂದು ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವುದು ಸರಿಯಲ್ಲ. ಒಳ್ಳೆಯ ಕೆಲಸಗಳನ್ನು ಹಿಂದಿನ ಜನ್ಮದಲ್ಲಿ ಮಾಡಿರುವುದಕ್ಕೆ ಮನುಷ್ಯರಾಗಿ ಹುಟ್ಟಿದ್ದೇವೆ. ಈಗ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುವುದರ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಂಕಣಬದ್ದರಾಗಬೇಕು ಎಂದು ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸಾಮೀಜಿ ಕರೆ ನೀಡಿದರು.

ತಾಲೂಕಿನ ಜಮ್ಮನಹಳ್ಳಿ ಗೇಟ್​ ಬಳಿ ಇರುವ ಓಂ ಶಕ್ತಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಚಂಡಿಕಾ ಹೋಮ, ಶ್ರೀ ಸಾಮೂಹಿಕ ದುರ್ಗಾಪೂಜೆ ಮತ್ತು ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ನಾಣ್ಣುಡಿಯಂತೆ ಶ್ರೀ ಧರ್ಮಸ್ಥಳ ಸಂಸ್ಥೆ ಮಾಡದೇ ಇರುವ ಕಾರ್ಯಕ್ರಮಗಳು ಇಲ್ಲ. ಇಂತಹ ಕ್ಷೇತ್ರ ಸಂರಕಷ್ಷಣೆ ಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಜನರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ವಿನೂತನ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದಲ್ಲೆ ಮಾದರಿಯಾಗಿದೆ ಎಂದರು.

ಮುಳಬಾಗಿಲು ವೈಶಿಷ್ಟ$್ಯತೆಯಿಂದ ಕೂಡಿದ್ದು, ಧಾರ್ಮಿಕ ಶ್ರದ್ಧಾ ಕೇಂದ್ರಗಳಿರುವ ಪುಣ್ಯೇತ್ರ. ಇಲ್ಲಿ ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ಏರ್ಪಡಿಸಿರುವುದು ಸಂತೋಷದ ಸಂಗತಿ. ಸನಾತನ ಧರ್ಮಕ್ಕೆ ಲಾಂತರ ವರ್ಷಗಳ ಇತಿಹಾಸವಿದೆ. ಇದನ್ನು ರಕಣೆ ಮಾಡಬೇಕಾದುದು ಎಲ್ಲರ ಜವಾಬ್ದಾರಿ ಎಂದರು.

ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಎ.ಪಿ.ರಾಮನಾಥ್​ ದೀತ್​ ನೇತೃತ್ವದಲ್ಲಿ ಶ್ರೀ ದುರ್ಗಾಪೂಜೆ, ಚಂಡಿಕಾ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ದೇವಾಲಯದ ಸಂಸ್ಥಾಪಕ ಅಧ್ಯ ಜಮ್ಮನಹಳ್ಳಿ ಕೃಷ್ಣ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹರೀಶ್​ ಕುಮಾರ್​, ಎಎಸ್​ಪಿ ಮನಿಷಾ, ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯ ಆರ್​.ಆರ್​. ರಾಜೇಂದ್ರಗೌಡ, ಕೆಡಿಪಿ ಸದಸ್ಯ ಕಾರ್ಗಿಲ್​ ವೆಂಕಟೇಶ್​, ದರಖಾಸ್ತು ಸಮಿತಿ ಸದಸ್ಯ ಗುಜ್ಜನಹಳ್ಳಿ ಮಂಜುನಾಥ್​, ಪುರಸಭೆ ಮಾಜಿ ಸದಸ್ಯ ಎನ್​. ರಾಜಶೇಖರ್​, ತಾಪಂ ಮಾಜಿ ಅಧ್ಯ ಎಂ. ವೆಂಕಟರವಣಪ್ಪ, ಎಪಿಎಂಸಿ ಮಾಜಿ ಅಧ್ಯ ಗೊಲ್ಲಹಳ್ಳಿ ವೆಂಕಟೇಶ್​, ಮುಖಂಡರಾದ ಎಂ.ಸಿ. ಸರ್ವಗೌಡ, ವಿ.ಕೆ. ರಾಜು, ಮಾಕೋರ್ಂಡಪ್ಪ, ಧನಂಜಯ, ಆವಣಿ ನವೀನ್​ ಹಾಗೂ ಒಕ್ಕೂಟದ ಪದಾಧಿ ಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net