ಹಿಂದುಗಳ ಹತ್ಯೆ ಖಂಡನೀಯ

28RAM1
Published on

ರಾಮದುರ್ಗ: ಕಾಶ್ಮೀರದ ಪಹಲ್ಗಾಮ್​ನಲ್ಲಿ ಹಿಂದುಗಳನ್ನು ಹತ್ಯೆ ಮಾಡಿರುವ ಉಗ್ರರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್​ ತಾಲೂಕು ಟಕದ ನೇತತ್ವದಲ್ಲಿ ಪ್ರತಿಭಟಿಸಿ, ತಹಸೀಲ್ದಾರಗೆ ಮನವಿ ಸಲ್ಲಿಸಿದರು.

26 ಹಿಂದುಗಳ ಹತ್ಯೆ ಮಾಡಿರುವ ಹೇಯ ಕೃತ್ಯವನ್ನು ಹಿಶ್ವ ಹಿಂದು ಪರಿಷತ್​ ಬಲವಾಗಿ ವಿರೋಧಿಸುತ್ತದೆ. ಕೂಡಲೇ ಕಾಶ್ಮೀರ ಹಾಗೂ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಸಂಟನೆ ನೇತತ್ವದಲ್ಲಿ ಉಗ್ರ ಹೋರಾಟ ಮಾಡಬೇಕಗುತ್ತದೆ ಎಂದು ಎಚ್ಚರಿಸಿದರು.

ವಿಶ್ವ ಹಿಂದು ಪರಿಷತ್​ ತಾಲೂಕು ಟಕದ ಅಧ್ಯ ಪ್ರಕಾಶ ಸೂಳಿಭಾಂವಿ, ಮುಖಂಡರಾದ ವಿ.ಕೆ. ಜೋಶಿ, ಅಮರ ಧೂತ್​, ಶ್ರೀನಿವಾಸ ಕುರುಡಗಿ, ನಾರಾಯಣ ಗಂಗೂರ, ಅರ್ಚಕ ಲಲ್ಲು ಮಹಾರಾಜ, ಪರಶುರಾಮ ಧಡಿ, ವಿನೋದ ಕರದಿನ, ಗಿರೀಶ ಕುಲಕರ್ಣಿ, ನಾಮದೇವ ಸೋರಿ, ಗುರುನಾಥ ಅರದ, ಶಂಕರ ಬೆನ್ನೂರ, ವಿ.ಎಸ್​. ಮುರುಡಿ, ಅಪ್ಪಣ್ಣ ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net