ಪ್ರಪಂಚಕ್ಕೆ ಶಾಂತಿ ಸಾರಿದ ಧರ್ಮ ಹಿಂದು

FotoJet (1)
Published on

ಚಿಕ್ಕನಾಯಕನಹಳ್ಳಿ : ಎಲ್ಲರನ್ನು ತನ್ನೊಟ್ಟಿಗೆ ತೆಗೆದುಕೊಂಡು ಹೋಗುವಂತಹ, ಪ್ರಪಂಚಕ್ಕೆ ನಾವೆಲ್ಲ ಒಂದು ಎಂದು ಶಾಂತಿಯನ್ನು ಸಾರಿದ ಧರ್ಮ ಹಿಂದು ಧರ್ಮ. ಈ ಧರ್ಮಕ್ಕೆ ಇರುವುದೊಂದೆ ದೇಶ ಅದು ಭಾರತ. ಅದರೆ ಇಂದು ಹಿಂದುಗಳ ಮೇಲೆ ನಡೆಯುತ್ತಿರುವಂತಹ ಆಕ್ರಮಣಗಳನ್ನು ನಾವು ವಿರೋಧಿಸಬೇಕಿದೆ ಎಂದು ವಿಶ್ವ ಹಿಂದು ಪರಿಷತ್​ನ ಮುಖಂಡ ಅಣೇಕಟ್ಟೆ ರಾಕೇಶ್​ ತಿಳಿಸಿದರು.

ಪಟ್ಟಣದ ನೆಹರು ವೃತ್ತದಲ್ಲಿ ಪಹಲ್ಗಾಮ್​ನಲ್ಲಿ ನಡೆದ ಹಿಂದುಗಳ ದಾರುಣ ಹತ್ಯೆಯನ್ನು ಹಾಗೂ ಸುಹಾಸ್​ ಶೆಟ್ಟಿ ಹತ್ಯೆ ಖಂಡಿಸಿ ಭಾನುವಾರ ರಾತ್ರಿ ವಿಶ್ವ ಹಿಂದು ಪರಿಷತ್​, ಬಜರಂಗದಳ ಸಂಘಟನೆಗಳು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದು ಪ್ರಪಂಚದಲ್ಲಿರುವ ರಾಷ್ಟ್ರಗಳಲ್ಲಿ ಹಲವಾರು ರಾಷ್ಟ್ರಗಳು ಕ್ರಿಶ್ಚಿಯನ್​ ಹಾಗೂ ಮುಸ್ಲಿಂ ಧರ್ಮಗಳಿವೆೆ. ಆದರೆ ಹಿಂದುಗಳಿಗಾಗಿ ಇರುವಂತಹ ದೇಶ ಭಾರತ ಮಾತ್ರ. ಇಂತಹ ದೇಶದ ಹಿಂದುಗಳು ಎಂದೂ ಸಹ ಬೇರೆಯವರ ಮೇಲೆ ತಮ್ಮ ಧರ್ಮವನ್ನು ಕತ್ತಿ ಹಿಡಿದಿಲ್ಲ, ಬೇದರಿಸಲು ಹೊಗಿಲ್ಲ. ಅದರೆ ಎಲ್ಲ ಧರ್ಮಗಳನ್ನು ಸಹಿಸಿಕೊಂಡು ಶಾಂತಿಯನ್ನು ಕಾಪಾಡುತ್ತಿದೆ. ಪ್ರಪಂಚದ ಅನೇಕ ಬುದ್ಧಿವಂತರು ತತ್ವಜ್ಞಾನಿಗಳು ಹೇಳಿದ್ದಾರೆ ಈಡೀ ಪ್ರಪಂಚಕ್ಕೆ ಶಾಂತಿದೊರೆತರೆ ಅದು ಭಾರತದಿಂದ ಮಾತ್ರ. ಇಂತಹ ಧರ್ಮದ ವಿರುದ್ಧ ಇಂದು ನಡೆಯುತ್ತಿರುವ ಆಕ್ರಮಣವನ್ನು ನಾವೆಂದು ಸಹಿಸುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಿಲ್ಟ್ರಿ ಶಿವಣ್ಣ, ನರಸಿಂಹಮೂರ್ತಿ, ಪ್ರಸನ್ನ ಗೋಪಾಲನಹಳ್ಳಿ, ಮಣಿಕಂಠ, ಚರಣ್​, ನಯನ್​, ಮಲ್ಲಿಕಾರ್ಜುನ, ಪ್ರತಾಪ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net