ಜಗತ್ತಿಗೆ ಹಿಂದು ಧರ್ಮವೇ ಅಡಿಪಾಯ

25sor3
ಸೊರಬದ ರಾಘವೇಂದ್ರ ಬಡಾವಣೆಯಲ್ಲಿ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ಕೃಷ್ಣವೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು. ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ಸಂಜೀವ ಆಚಾರ್, ನಿರಂಜನ್, ಶರತ್, ವಾಸಂತಿ ನಾವುಡಾ, ವೀಣಾ ಶ್ರೀಧರ್, ಕಾವ್ಯಾ, ಕೋಮಲಾ ಪುರಾಣಿಕ್ ಇತರರಿದ್ದರು.
Published on

ಸೊರಬ: ಭಾರತೀಯ ಹಿಂದು ಧರ್ಮ ಜ್ಞಾನ, ವಿಜ್ಞಾನ, ಯೋಗ ಸೇರಿ ಅನೇಕ ವಿಷಯಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ ಎಂದು ಜಡೆ ಹಿರೇಮಠ ಮತ್ತು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಹೇಳಿದರು.

ಭಾನುವಾರ ರಾತ್ರಿ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳದ ನೇತೃತ್ವದಲ್ಲಿ ವಿಶ್ವ ಹಿಂದು ಮಹಾಸಭಾ ಗಣಪತಿ ಉತ್ಸವ ಸಮಿತಿಯಿಂದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಭೆ ಹಾಗೂ ವಿಹಿಂಪ ಸಂಸ್ಥಾಪನ ದಿನ ನಿಮಿತ್ತ ಏರ್ಪಡಿಸಿದ್ದ ಕೃಷ್ಣವೇಷ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾರತದಲ್ಲಿ ಸುಮಾರು 120 ರೀತಿಯ ವೈವಿಧ್ಯಮಯ ಭೂ ಪ್ರದೇಶವನ್ನು ಹೊಂದಿದೆ. ಅಲ್ಲದೆ ಜಗತ್ತಿನಲ್ಲಿ ಎಲ್ಲಿಯೂ ಬೆಳೆಯದಂತಹ ವಿವಿಧ ರೀತಿಯ ಫಲಪುಷ್ಪ, ಆಹಾರಗಳನ್ನು ಇಲ್ಲಿ ಕಾಣಬಹುದು. ಹಿಂದು ಸಂಸ್ಕೃತಿಗೆ ಸುಮಾರು ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. ಇಸ್ಲಾಂ, ಬ್ರಿಟೀಷರು ಹಿಂದು ಸಂಸ್ಕೃತಿಯ ಮೇಲೆ ಆಕ್ರಮಣ ಎಸಗಿದರೂ ಹಿಂದು ಧರ್ಮ ಭಾರತದಲ್ಲಿ ಭದ್ರವಾಗಿ ನೆಲೆಯೂರಿದೆ ಎಂದರು.
ದೇಹ ಮತ್ತು ಮನಸ್ಸಿನ ಆರೋಗ್ಯಕ್ಕಾಗಿ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪತಂಜಲಿ ಮುನಿಹಳು ಯೋಗ ಶಾಸ್ತçದ ಮೂಲಕ ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಮೆಕಾಲೆ ಶಿಕ್ಷಣ ಪದ್ಧತಿಗೂ ಮೊದಲು ದೇಶದಲ್ಲಿ ಸುಮಾರು ಐದು ಲಕ್ಷ ಗುರುಕುಲಗಳಿದ್ದವು ಎಂಬುದು ಈ ನೆಲದ ವೈಶಿಷ್ಟ÷್ಯತೆಗೆ ಸಾಕ್ಷಿಯಾಗಿದೆ. ಪಾಲಕರು ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬಾಲ್ಯದಿಂದಲೇ ತಿಳಿಸಿ ಕೊಡುವ ಕೆಲಸ ಮಾಡಬೇಕು ಎಂದರು.
ವಿಶ್ವ ಹಿಂದು ಮಹಾಸಭಾದ ಗೌರವಾಧ್ಯಕ್ಷ ಸಂಜೀವ ಆಚಾರ್, ಅಧ್ಯಕ್ಷ ನಿರಂಜನ್, ಖಜಾಂಚಿ ಎಸ್.ಎನ್. ಶರತ್, ಮಾತೃಮಂಡಳಿಯ ವಾಸಂತಿ ನಾವುಡಾ, ವೀಣಾ ಶ್ರೀಧರ್, ದುರ್ಗಾವಾಹಿನಿಯ ಕಾವ್ಯಾ, ಕೋಮಲಾ ಪುರಾಣಿಕ್, ಪ್ರಮುಖರಾದ ಚಂದನ್, ಶಶಿಕುಮಾರ್, ಉಮಾಶಂಕರ್, ಶರತ್, ನೆಮ್ಮದಿ ಶ್ರೀಧರ್, ವೀರೇಶ್, ಮಣಿಕಂಠ, ರಾಘು ಮಡಿವಾಳ, ಕಾರ್ತಿಕ್, ಪುನಿತಾ, ಕೆ.ವಿನಾಯಕ, ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net