ಹಿಂದುಗಳು ಶಾಸ್ತ್ರ-ಶಸ್ತ್ರ ಸಮನಾಗಿ ಬಳಸಿ: ಯುವಕರಿಗೆ ಗೋಖಲೆ ಸಲಹೆ

ಕಲಬುರಗಿ ಹಿಂದು ತೇಜಸ್ಸು ಜಾಗೃತಗೊಂಡಿದ್ದರಿAದಲೇ ಹಲವು ದುಷ್ಟಶಕ್ತಿಗಳು ಈಗ ಬಗ್ಗಲಾರಂಭಿಸಿವೆ. ಇನ್ನಷ್ಟು ಬಲಿಷ್ಠರಾಗಲು ಪ್ರತಿಯೊಬ್ಬ ಹಿಂದು ಇನ್ಮುಂದೆ ಶಾಸ್ತç ಮತ್ತು ಶಸ್ತçವನ್ನು ಸಮ ಪ್ರಮಾಣದಲ್ಲಿ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಕರು ಹೆಜ್ಜೆ ಇಡಬೇಕು ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಕಾರ್ಕಳ ಹೇಳಿದರು.
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಿಂದು ತೇಜಸ್ಸು ಜಾಗೃತಗೊಂಡಿದ್ದರಿAದಲೇ ಹಲವು ದುಷ್ಟಶಕ್ತಿಗಳು ಈಗ ಬಗ್ಗಲಾರಂಭಿಸಿವೆ. ಇನ್ನಷ್ಟು ಬಲಿಷ್ಠರಾಗಲು ಪ್ರತಿಯೊಬ್ಬ ಹಿಂದು ಇನ್ಮುಂದೆ ಶಾಸ್ತç ಮತ್ತು ಶಸ್ತçವನ್ನು ಸಮ ಪ್ರಮಾಣದಲ್ಲಿ ಬಳಕೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವಕರು ಹೆಜ್ಜೆ ಇಡಬೇಕು ಎಂದು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಕಾರ್ಕಳ ಹೇಳಿದರು.
ಶುಕ್ರವಾರ ಸಂಜೆ ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ವೀರಶೈವ ಕಲ್ಯಾಣ ಮಂಟಪ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮಹಾನಗರ ಘಟಕದಿಂದ ಶೌರ್ಯ ಜಾಗರಣ ರಥಯಾತ್ರೆ ನಿಮಿತ್ತ ಜರುಗಿದ ಯುವಕರ ಬೃಹತ್ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಒಬ್ಬ ಕಸಬ್, ಒಬ್ಬ ಅಫ್ಜಲ್‌ಖಾನ್ ಹುಟ್ಟಿದರೆ ಅವರನ್ನು ನಮ್ಮವರು ಹೇಗೆ ಮುಗಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಉಗ್ರಗಾಮಿ ಚಟುವಟಿಕೆ ಮಾಡುತ್ತಿದ್ದ ಪಾಕ್ ಇಂದು ಭಿಕಾರಿಯಾಗಿ ನಿಂತಿದೆ. ವಿಶ್ವವನ್ನೇ ಹಾಳು ಮಾಡಲು ಹೊರಟಿದ್ದ ಚೀನಾ ಸತ್ತು ಹೋಗುವ ಸ್ಥಿತಿಗೆ ಬಂದಿದೆ ಎಂದರು.
ಹಿAದು ಯುವಕರನ್ನು ಜಾಗೃತಗೊಳಿಸಲು ಶೌರ್ಯ ಯಾತ್ರೆ ನಡೆಸಲಾಗುತ್ತಿದೆ. ಹಿಂದು ಜಾಗೃತರಾದರೆ ರಾಜ್ಯ, ದೇಶ ಅಷ್ಟೇ ಅಲ್ಲ, ವಿಶ್ವಕ್ಕೆ ಒಳಿತಾಗಲಿದೆ. ಹಿಂದು ತತ್ವ ವಿಶ್ವವನ್ನು ಬೆಳಗುವ ಜತೆಗೆ ಪ್ರತಿಯೊಬ್ಬರು ನೆಮ್ಮದಿಯಿಂದ ಇರುವಂತೆ ಮಾಡಲಿದೆ. ಹಿಂದು ಧರ್ಮ ಸನಾತನವಾಗಿದೆ. ಆದರೆ, ಕೆಲವರು ಇದರ ವಿರುದ್ಧ ಇಲ್ಲದ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಾಳಾ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಗುರುಮೂರ್ತಿ ಶಿವಾಚಾರ್ಯರು, ದೇವಾಪುರ-ಬಬಲಾದಿನ ಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯರು, ಚಿನ್ಮಯಗಿರಿಯ ಪೂಜ್ಯಶ್ರೀ ವೀರಮಹಾಂತ ಶಿವಾಚಾರ್ಯರು, ಮಾಶಾಳದ ಪೂಜ್ಯ ಮರುಳಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ವಿಎಚ್‌ಪಿ ಪ್ರಾಂತ ಉಪಾಧ್ಯಕ್ಷÀ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ ಗುತ್ತೇದಾರ್, ಪರಿಷತ್ತಿನ ಅಧ್ಯP್ಷÀ ಶ್ರೀಮಂತ ರಾಜು ನವಲದಿ, ವಿಭಾಗ ಕಾರ್ಯದರ್ಶಿ ಶಿವರಾಜ ಸಂಗೊಳಗಿ, ಪ್ರಮುಖರಾದ ಸುಭಾಷ ಕಾಂಬ್ಳೆ, ಸುರೇಶ ಹೇರೂರ, ಲಕ್ಷö್ಮಣರಾವ ಪಾಟೀಲ್, ಪುಂಡಲೀಕ ದಳವಾಯಿ, ರಾಜು ಚವ್ಹಾಣ್, ಬಸವರಾಜ ಸೂಗೂರ, ಅರುಣಕುಮಾರ ಪವಾರ್, ರವಿ ಪೂಜಾರಿ, ಶಿವಕುಮಾರ ಗೋಖಲೆ,  ಅಶ್ವಿಶಕುಮಾರ್, ಪ್ರಶಾಂತ ಗುಡ್ಡಾ, ಸತೀಶ ಮಾವೂರ್, ಶೇಷಾದ್ರಿ ಕುಲಕರ್ಣಿ, ದಯಾಘನ್ ಧಾರವಾಡಕರ್, ಶಿವಯೋಗಿ ನಾಗನಹಳ್ಳಿ ಇತರರಿದ್ದರು. ಮಲ್ಲಿಕಾರ್ಜುನ ವಂದಿಸಿದರು. ಸಾವಿರಾರು ಯುವಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net