ಹಿಂದುಗಳು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ

26 MSK 01
Published on

ಮಸ್ಕಿ: ಹಿಂದುಗಳು ಒಗ್ಗಟ್ಟು ಆಗದಿದ್ದರೆ ಉಳಿಗಾಲವಿಲ್ಲ. ಭಾರತದಲ್ಲಿ ಹಿಂದುಗಳನ್ನು ಒಡೆದಾಳುವ ಕುತಂತ್ರ ನಡೆದಿದೆ. ಅದರ ವಿರುದ್ಧ ಗಟ್ಟಿಯಾಗಿ ನಿಲ್ಲಲು ಯುವಕರು ಪಣತೊಡಬೇಕೆಂದು ಹಿಂದು ಹೋರಾಟಗಾರ್ತಿ ಚೈತ್ರಾ ಕುಂದಾಪುರ ಹೇಳಿದರು.

ಪಟ್ಟಣದ ತೇರಿನ ಮನೆ ಹತ್ತಿರ ಶನಿವಾರ ಭಜರಂಗ ದಳ ಹಾಗೂ ವಿಶ್ವಹಿಂದು ಪರಿಷತ್ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತವನ್ನು ವಿಶ್ವಗುರು ಮಾಡಲು ಹಿಂದು ಸಂಘಟನೆಗಳ ಕಾರ್ಯಕರ್ತರು ಕಂಕಣ ಬದ್ಧರಾಗಬೇಕಾದ ಕಾಲ ಬಂದಿದೆ. ಶಿವಾಜಿ ಜಯಂತಿ ಎಂದರೆ ಕೆಲವರಿಗೆ ಹೊಟ್ಟೆ ಉರಿ, ಶಿವಾಜಿ ಇರದಿದ್ದರೆ ಇವತ್ತು ಹಿಂದು ಸಮಾಜ ಮತಾಂತರವಾಗಿ ನಾಶವಾಗುತ್ತಿತ್ತು. ಅಖಂಡ ಹಿಂದು ಸಮಾಜಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ ಶಿವಾಜಿ ಅವರು ಕನ್ನಡಿಗರು ಅಲ್ಲ ಎಂಬ ಬೇಧ ಹುಟ್ಟು ಹಾಕುವವರಿಗೆ ಪಾಠ ಕಲಿಸಬೇಕು. ಶಿವಾಜಿ ಇರದಿದ್ದರೆ ಇವತ್ತು ಹಿಂದು ದೇವಸ್ಥಾನಗಳು ಇರುತ್ತಿರಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net