ಕಾಂಗ್ರೆಸ್‌ನಿಂದ ಹಿಂದು ಸಮಾಜಕ್ಕಿಲ್ಲ ರಕ್ಷಣೆ

Kse
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದಿಂದ ಹಿಂದು ಸಮಾಜಕ್ಕೆ ರಕ್ಷಣೆ ಇಲ್ಲ ಎಂಬುದು ನೇಹಾ ಪ್ರಕರಣದಿಂದ ಸಾಬೀತಾಗಿದೆ. ಒಂದೆಡೆ ಅಲ್ಪಸಂಖ್ಯಾತರ ಅತಿಯಾದ ಓಲೈಕೆ, ಆರೋಪಿಗಳ ರಕ್ಷಣೆ, ಕೊಲೆ ಮಾಡಿದವರನ್ನು ಬೆಂಬಲಿಸುವುದು ಸಾಮಾನ್ಯವಾಗಿದೆ. ಇನ್ನು ಮುಂದೆ ಹಿಂದು ಸಮಾಜ ಇದನ್ನು ಸಹಿಸುವುದಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಕಾಂಗ್ರೆಸ್ ಚುನಾವಣೆ ದಾಳವಾಗಿ ಬಳಸುತ್ತಿದೆ. ಗೃಹ ಸಚಿವರು ತನಿಖೆಯಾಗುವ ಮೊದಲೇ ಇದು ಲವ್ ಜಿಹಾದ್ ಅಲ್ಲ. ಅವರಿಬ್ಬರು ಪ್ರೇಮಿಗಳು ಎಂದಿದ್ದಾರೆ. ತನಿಖೆಗೆ ಮುನ್ನವೇ ತೀರ್ಮಾನ ಮಾಡಲು ಇವರು ನ್ಯಾಯಾಧೀಶರೇ ಎಂದು ಖಾರವಾಗಿ ಪ್ರಶ್ನಿಸಿದರು.
ಬಹುಸಂಖ್ಯಾತ ಹಿಂದು ಸಮಾಜ ಆಕ್ರೋಶಕ್ಕೆ ಒಳಗಾಗಿ ಕಾನೂನು ಕೈಗೆ ತೆಗೆದುಕೊಂಡರೆ ಮುಸ್ಲಿಂರ ಕತೆ ಏನಾಗಬಹುದು ಎಂಬುದನ್ನು ಮುಸ್ಲಿಂ ಸಮಾಜದ ಹಿರಿಯ ಮುಖಂಡರು ಚಿಂತನೆ ಮಾಡಬೇಕು. ತಮ್ಮ ಸಮಾಜದ ಕಿಡಿಗೇಡಿ ಯುವಕರಿಗೆ ಬುದ್ಧಿ ಹೇಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net