ಹಲಾಲ್ ಪ್ರಮಾಣೀಕರಣ ನಿಲ್ಲಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

mng-20oct-manavi
Published on



ಮಂಗಳೂರು : ಹಲಾಲ್ ಪ್ರಮಾಣೀಕರಣ ವ್ಯವಸ್ಥೆಯ ಮೇಲೆ ದೇಶಾದ್ಯಂತ ನಿಷೇಧ ಹೇರುವ ಕುರಿತು ಹಿಂದೂ ಜನಜಾಗೃತಿ
ಸಮಿತಿಯು ಅಪರ ಜಿಲ್ಲಾಧಿಕಾರಿ ರಾಜು ಕೆ. ಇವರ ಮೂಲಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ನೀಡಿದೆ.
ಭಾರತದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತಿರುವ ಹಲಾಲ್ ಪ್ರಮಾಣೀಕರಣ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಕರೆ ನೀಡಿದೆ. ಮೊದಲು ಮಾಂಸಾಹಾರಕ್ಕೆ ಸೀಮಿತವಾಗಿದ್ದ ಹಲಾಲ್ ಈಗ ಸಕ್ಕರೆ, ಎಣ್ಣೆ, ಹಿಟ್ಟು, ಸೌಂದರ್ಯ ವರ್ಧಕ ಮುಂತಾದ ಉತ್ಪನ್ನಗಳಿಗೂ ವಿಸ್ತರಿಸಿದೆ. ಭಾರತದ ಅಧಿಕೃತ ಸಂಸ್ಥೆಗಳಾದ ಎಫ್‌ಎಸ್‌ಎಸ್‌ಎಐ ಮತ್ತು ಎಫ್‌ಡಿಎ ಇರುವಾಗ, ಪ್ರತ್ಯೇಕ ಧಾರ್ಮಿಕ ಪ್ರಮಾಣಪತ್ರದ ಅಗತ್ಯವೇನು ಎಂದು ಸಮಿತಿಯು ಪ್ರಶ್ನಿಸಿದೆ.
ಬಹುಸಂಖ್ಯಾತರ ಹಿಂದೂಗಳ ಮೇಲೆ ಹಲಾಲ್ ಉತ್ಪನ್ನಗಳನ್ನು ಹೇರಿಕೆ ಮಾಡಲಾಗುತ್ತಿದೆ. ಹಲಾಲ್‌ನಿಂದ ಬರುವ ಹಣವು ದೇಶದ ಭದ್ರತೆಗೆ ಹಾನಿ ಮಾಡುವ ಶಕ್ತಿಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಸಲಾಗಿದೆ. ವಕೀಲರಾದ ತೀರ್ಥೇಶ್, ಈಶ್ವರ ಕೊಟ್ಟಾರಿ, ಹಿಂದೂ ಸೇವಾ ಸಮಿತಿಯ ಸುರೇಂದ್ರ ಜಪ್ಪಿನಮೊಗರು, ಯೋಗೀಶ್ ಜಪ್ಪಿನಮೊಗರು, ಹಿಂದೂ ಮಹಾಸಭಾದ ಲೋಹಿತ್. ಕೆ. ಸುವರ್ಣ, ಲೋಕೇಶ್ ಉಳ್ಳಾಲ, ನಾರಾಯಣ ಗುರು ಸೇವಾ ಸಮಿತಿಯ ದಿನಕರ ಪೂಜಾರಿ ಬಜಾಲ್, ಪ್ರಮುಖರಾದ ಉಮೇಶ ರಾವ್,
ಶೇಖರ್ ಕೊಟ್ಟಾರಿ, ರಾಜೇಂದ್ರ ಪೇಜಾವರ, ವಿದ್ಯಾ ಪೇಜಾವರ, ಜಯಪ್ರಕಾಶ್ ಪೂಜಾರಿ, ಪವಿತ್ರಾ ಕುಡ್ವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net