

ವಿಟ್ಲ: ಆಧ್ಯಾತ್ಮಿಕ ನೆಲೆಗಟ್ಟಿನ ಆವರಣದೊಳಗೆ ಎಲ್ಲರೂ ಸಂಘಟಿತರಾದಾಗ ಬಲ ಹೆಚ್ಟುತ್ತದೆ. ಅಹಂಕಾರ ಕಡಿಮೆಯಾದಾಗ ಸಂಘಗಳು ಯಶಸ್ವಿಯಾಗಿ ಮುಂದುವರಿಯುತ್ತವೆ. ಸ್ವಾರ್ಥ ಬಿಡಬೇಕಾದರೆ ಧರ್ಮ ಶಿಕ್ಷಣದ ಅಗತ್ಯವಿದ್ದು, ಧರ್ಮ ಇದ್ದಲ್ಲಿ ಗೆಲವು ನಿಶ್ಚಿತವಾಗಿರುತ್ತದೆ. ರಾಷ್ಟ್ರಕ್ಕಾಗಿ, ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲು ಇಡುವ ಕಾರ್ಯವಾಗಬೇಕಾಗಿದೆ. ಸಂಘಟನೆಗಳು ಪ್ರತಿಯೊಬ್ಬರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೈಕೋರ್ಟ್ ವಕೀಲ ಕೃಷ್ಣ ಮೂರ್ತಿ ಹೇಳಿದರು.
ಬೊಬ್ಬೆಕೇರಿ ಶ್ರೀರಾಮ ಮಂದಿರದಲ್ಲಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಹಿಂದು ರಾಷ್ಟ್ರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.
ಸನಾತನ ಸಂಸ್ಥೆಯ ವಕ್ತಾರರಾದ ಲಕ್ಷ್ಮೀ ಪೈ ಮಾತನಾಡಿ, ಭಾರತೀಯ ಧರ್ಮ ಶಾಸ್ತ್ರದಲ್ಲಿ ಹಿಂದುವಿನ ಬಗ್ಗೆ ವ್ಯಾಖ್ಯಾನ ಮಾಡಿದ್ದಾರೆ. ಭಾರತದಲ್ಲಿ ಅಪಾರ ಜ್ಞಾನದ ಖಜಾನೆಯಿದ್ದರೂ, ವಿದೇಶಿ ಸಂಸ್ಕೃತಿಯತ್ತ ಮಾರು ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಧರ್ಮಾಚರಣೆಗಳಿಂದ ದೂರವಾಗುತ್ತಿರುವುದರಿಂದ ಸಮಾಜ ಹಾದಿ ತಪ್ಪುತ್ತಿದ್ದು, ಕರ್ಮದಲ್ಲಿ ಹಿಂದುಗಳಾಗಬೇಕಾಗಿದೆ. ಪ್ರತಿಯೊಬ್ಬರಲ್ಲಿ ಆತ್ಮ ಬಲವನ್ನು ತುಂಬಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದು ತಿಳಿಸಿದರು.
ಸಮಿತಿ ವಕ್ತಾರ ಡಾ. ಪ್ರಣವ್ ಮಲ್ಯ ಉಪಸ್ಥಿತರಿದ್ದರು. ರಜತ್ ಭಟ್ ವೇದ ಮಂತ್ರ ಪಠಿಸಿದರು. ವಿವೇಕ್ ಪೈ ಪ್ರಸ್ತಾವನೆಗೈದರು. ಮಾನಸಾ, ಶ್ವೇತಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.