ಸೌಹಾರ್ದತೆ ಸಾರಿದ ಹಿಂದು ಮುಸ್ಲಿಮರು

16sunti05
ಹಿಂದುಗಳು ಈದ್‌ಮಿಲಾದ್ ಮೆರವಣಿಗೆಯ ಸಂದರ್ಭ ಮುಸ್ಲಿಮರಿಗೆ ತಂಪು ಪಾನಿಯ ವಿತರಣೆ ಮಾಡಿದರು.
Published on

ಸುಂಟಿಕೊಪ್ಪ:ಪರಸ್ಪರ ಸಹೋದರ ಸಂಬಂಧ ವೃದ್ಧಿಸುವ ನಂಬಿಕೆ ಮತ್ತು ಆಚಾರ ವಿಚಾರಗಳನ್ನು ಸಮಾನವಾಗಿ ಗೌರವಿಸುವ ಸಮಾನ ಮನಸ್ಕರಿಂದ ಸುಂಟಿಕೊಪ್ಪ ಹೋಬಳಿಯ 7ನೇ ಹೊಸಕೋಟೆಯಲ್ಲಿ ವಿಶೇಷ ಕಾರ್ಯಕ್ರಮವೊಂದು ಜರುಗಿತು.

ಭಾನುವಾರದಂದು ಸಂಜೆ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಮುಸ್ಲಿಮರು ಹಿಂದುಗಳಿಗೆ ಸಿಹಿ ಮತ್ತು ತಂಪು ಪಾನಿಯ ವಿತರಣೆ ಮಾಡಿದರು.
ಭಾನುವಾರದಂದು ಸಂಜೆ ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಮುಸ್ಲಿಮರು ಹಿಂದುಗಳಿಗೆ ಸಿಹಿ ಮತ್ತು ತಂಪು ಪಾನಿಯ ವಿತರಣೆ ಮಾಡಿದರು.


7ನೇ ಹೊಸಕೋಟೆಯಲ್ಲಿ ಗಣೇಶೋತ್ಸವದ ಅಂಗವಾಗಿ ಭಾನುವಾರ ನಡೆದ ಗಣೇಶಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ನೂರಾರು ಯುವಕರು ಮೆರವಣಿಗೆಯುದ್ದಕ್ಕೂ ಹಿಂದುಗಳಿಗೆ ಸಿಹಿ ತಿಂಡಿ ಮತ್ತು ತಂಪು ಪಾನಿಯ ವಿತರಣೆ ಮಾಡುವ ಸೌಹಾರ್ದದತೆ ಮೆರೆದಿದ್ದಾರೆ. ಇನ್ನು ಸೋಮವಾರ ಹಿಂದುಗಳು ಈದ್‌ಮಿಲಾದ್ ಮೆರವಣಿಗೆಯ ಸಂದರ್ಭ ಮುಸ್ಲಿಮರಿಗೆ ಸಿಹಿ ತಿಂಡಿ ಮತ್ತು ತಂಪು ಪಾನಿಯ ವಿತರಣೆ ಮಾಡಿ ಸ್ನೇಹದ ಬೇಸುಗೆಯನ್ನು ಗಟ್ಟಿಗೊಳಿಸಿದ್ದಾರೆ. ಈ 2 ಕಾರ್ಯಕ್ರಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net