ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮೂಲಕ ಭಾವೈಕ್ಯತೆ ಮೆರೆದ ಹಿಂದು -ಮುಸ್ಲಿಮರು

1661774308489
Published on



ಮೈಸೂರು:
ಸುಜೀವ್ ಫೌಂಡೇಷನ್ ವತಿಯಿಂದ ಒಂದು ದಿನ ಮೊದಲೇ ಸೋಮವಾರ ಗೌರಿ-ಗಣೇಶ ಹಬ್ಬವನ್ನು ಆಚರಿಸಲಾಯಿತು.
ವಿಜಯನಗರದ ಎರಡನೇ ಹಂತದ ಸುಜೀವ್ ಫೌಂಡೇಷನ್ ಕಚೇರಿಯಲ್ಲಿ ಹಿಂದು ಹಾಗೂ ಮುಸ್ಲಿಂ ಸಮುದಾಯದವರು ಒಟ್ಟಾಗಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಇದೇ ವೇಳೆ ಫೌಂಡೇಷನ್ ವತಿಯಿಂದ ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಲಾಯಿತು. ಮುಸ್ಲಿಂ ಸಮುದಾಯದ ಮಹಿ ಳೆಯರಿಗೆ ಸೀರೆ ವಿತರಿಸುವ ಮೂಲಕ ಹಬ್ಬದ ಶುಭ ಕೋರಲಾಯಿತು.
2009ರ ಮಿಸ್ ಇಂಡಿಯಾ ವರ್ಲ್ಡ್ ಪೂಜಾ ಚೋಪ್ರಾ ಮಾತನಾಡಿ, ನಟ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆದು ಭಾವುಕ ರಾದರು. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆ. ಕನ್ನಡ ಅಂದರೆ ನನಗೆ ಅಚ್ಚುಮೆಚ್ಚು . ಅದರಲ್ಲೂ ಮೈಸೂರು ಎಂದರೆ ತುಂಬಾನೇ ಇಷ್ಟ ಎಂದರು. ಸುಜೀವ್ ಫೌಂಡೇಷನ್ ಅಧ್ಯಕ್ಷ ರಾಜಾರಾಂ, ಶಲ್ಲಿ , ಮುಸ್ಲಿಂ ಧರ್ಮಗುರು ಮೊಹ ಮ್ಮದ್ ಯೂಸಫ್ , ಕಾಂಗ್ರೆಸ್ ಮುಖಂಡ ಎನ್. ಎಂ.ನವೀನ್‌ಕುಮಾರ್, ವಿನಯ್ ಕಣಗಾಲ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವ ರಾಜ್ ಬಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net