ಲಾಡ್ಜ್‌ನಲ್ಲಿದ್ದ ಹಿಂದು-ಮುಸ್ಲಿಂ ಜೋಡಿ ಪೊಲೀಸರ ವಶಕ್ಕೆ

Published on

ಕುಂದಾಪುರ: ಬೈಂದೂರು ತಾಲೂಕು ಉಪ್ಪುಂದದ ವಸತಿಗೃಹದಲ್ಲಿ ಶುಕ್ರವಾರ ಭಿನ್ನಕೋಮಿನ ಜೋಡಿ ತಂಗಿದ್ದ ವಿಷಯ ತಿಳಿದು ಹಿಂದು ಸಂಘಟನೆ ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಜೋಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತೊಕ್ಕೊಟ್ಟಿನಲ್ಲಿ ಗುಜರಿ ಅಂಗಡಿ ಹೊಂದಿರುವ ಉಳ್ಳಾಲದ ಅಮೀರ್ ಆಲಿ(45) ಉಳ್ಳಾಲದ ಹಿಂದು ಸಮುದಾಯದ ಯುವತಿಯನ್ನು ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದ. ಆಕೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಒಪ್ಪಿಗೆಯಿಂದಲೇ ತೆರಳಿದ್ದರು ಎನ್ನಲಾಗಿದೆ. ಯುವತಿಯ ಮನೆಯವರಿಗೆ ಮಾಹಿತಿ ನೀಡಿದ ಬಳಿಕ ಅವರು ಬೈಂದೂರು ಠಾಣೆಗೆ ಭೇಟಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net