

ಮಡಿಕೇರಿ: ಓಣಾಘೋಷಂ-ಓಣಂ ಸದ್ಯ ೨೦೨೨ರ ಪ್ರಯುಕ್ತ ಹಿಂದೂ ಮಲಯಾಳಿ ಸಂಘ ಮಡಿಕೇರಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ’ವಾಮನನ್’ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ನಾಕೌಟ್ ಮಾದರಿಯಲ್ಲಿ ನಡೆದ ೫ ಓವರ್ ಪಂದ್ಯದಲ್ಲಿ ೬ ತಂಡಗಳು ಪಾಲ್ಗೊಂಡಿತ್ತು. ಫೈನಲ್‌ನಲ್ಲಿ ಪಂದ್ಯದಲ್ಲಿ ಮಲಯಾಳಿ ಸ್ಟ್ರೈಕರ್ಸ್ ತಂಡವನ್ನು ವಾಮನನ್ ತಂಡ ಮಣಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತ್ತು. ಮಲಯಾಳಿ ಸ್ಟ್ರೈಕರ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ನಂತರ ಸಮಾಜ ಬಾಂಧವರಿಗೆ ಹಗ್ಗಜಗ್ಗಾಟ, ಗೋಣಿಚೀಲದ ಓಟ, ಮ್ಯುಸಿಕಲ್ ಚೇರ್, ಮಡಿಕೆ ಒಡೆಯುವುದು, ಕಾಲುಕಟ್ಟಿ ಓಟ, ವೇಗದ ನಡಿಗೆ ನಡೆಯಿತು. ಮಹಿಳೆಯರಿಗೆ ನಿಂಬೆ ಚಮಚ ಓಟ, ಹಗ್ಗಜಗ್ಗಾಟ, ಸೂಜಿ ನೂಲಿನ ಓಟ, ಬಲೂನ್ ಬ್ಲಾಸ್ಟ್, ಬಾಂಬ್ ಇನ್ ದಿ ಸಿಟಿ ಸ್ಪರ್ಧೆ ನಡೆದರೆ, ಮಕ್ಕಳಿಗೆ ಕಾಳು ಹೆಕ್ಕುವುದು, ಚಿತ್ರಕಲೆ ಸ್ಪರ್ಧೆ-ಪೂಕಳಂ, ಮಾವೇಲಿ, ಗೋಣಿಚೀಲ ಓಟ ಸ್ಪರ್ಧೆ ನಡೆಯಿತು.
ಈ ಸಂದರ್ಭ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್ ಮಾತನಾಡಿ, ಓಣಾಘೋಷಂ-ಓಣಂ ಸದ್ಯ ೨೦೨೨ರ ಪ್ರಯುಕ್ತ ಜನಾಂಗ ಬಾಂಧವರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.