ಹಿಂದೂ ಮಲಯಾಳ ಸಮಾಜದಿಂದ ಅ.೯ ರಂದು ಸೋಮವಾರಪೇಟೆಯಲ್ಲಿ ಓಣಂ ಉತ್ಸವ

IMG-20221007-WA0056
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹಿಂದೂ ಮಲಯಾಳ ಸಮಾಜ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಅ.೯ ರಂದು ಸೋಮವಾರಪೇಟೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಓಣಂ ಉತ್ಸವ ಆಯೋಜಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಹೇಳಿದ್ದಾರೆ.

ಅಂದು ಬೆಳಗ್ಗೆ ೬.೪೫ ಕ್ಕೆ ಪೂಕಳಂ ಸ್ಪರ್ಧೆಗೆ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದಾಸ್ ಉದ್ಘಾಟಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಮುತ್ತಪ್ಪ ದೇವಾಲಯದಿಂದ ಬೆಳಗ್ಗೆ ೯ ಗಂಟೆಗೆ ಪ್ರಾರಂಭವಾಗುವ ಓಣಾಘೋಷ ಯಾತ್ರೆಗೆ ಹಿಂದೂ ಮಲಯಾಳ ಸಮಾಜ ಅಧ್ಯಕ್ಷ ವಿ.ಎಂ. ವಿಜಯ, ಸ್ಥಾಪಕಾಧ್ಯಕ್ಷ ಪಿ.ಡಿ. ಪ್ರಕಾಶ್ ಚಾಲನೆ ನೀಡಲಿದ್ದಾರೆ. ಸಿಂಗಾರಿ ಮೇಳ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಯ ಲಿದೆ.

೧೧ ಗಂಟೆಗೆ ವಿ.ಎಂ. ವಿಜಯ ಅಧ್ಯಕ್ಷತೆಯಲ್ಲಿ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸೋಲೋರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ, ಕಾಞಂಗಾಡ್ ಗೃಹಾಸ್ಥಾಶ್ರಮದ ಗಂಗಾಜೀ ನಾಯರ್ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಸಚಿವ ವಿ. ಸುನಿಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಮುಖ್ಯಅತಿಥಿಗಳಾಗಿ ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ, ಎಂಎಲ್ಸಿ ಎಂಪಿ. ಸುಜಾ ಕುಶಾಲಪ್ಪ, ಮಾಜಿ ಸಚಿವ ಬಿ.ಎ. ಜೀವಿಜಯ, ಚೌಡ್ಲು ಗ್ರಾಪಂ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಮುಖರಾದ ಎಚ್.ಎಸ್. ಚಂದ್ರಮೌಳಿ, ಕೆ.ಎಸ್. ರಮೇಶ್, ವಿ.ಕೆ. ಲೋಕೇಶ್, ಡಾ.ಸಿ.ಆರ್. ಉದಯ್‌ಕುಮಾರ್, ಟಿ.ಕೆ. ಸಾಯಿಕುಮಾರ್, ಡಾ.ಮಂಥರ್‌ಗೌಡ, ಎಸ್.ಬಿ. ಭರತ್‌ಕುಮಾರ್ ಮತ್ತಿ
ತರರು ಪಾಲ್ಗೊಳ್ಳಲಿದ್ದಾರೆ.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ಸಮಾಜದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗುವುದು. ಇದರೊಂದಿಗೆ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಮಧ್ಯಾಹ್ನ ೧೨.೩೦ ಕ್ಕೆ ಓಣಂ ಸದ್ಯ ಇರುತ್ತದೆ. ೩ ಗಂಟೆ ಮೇಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ ಗಂಟೆಗೆ ವಿ.ಎಂ. ವಿಜಯ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಎಸ್‌ಎನ್‌ಡಿಪಿ ಮಡಿಕೇರಿ ತಾಲೂಕು ಅಧ್ಯಕ್ಷ ಟಿ.ಆರ್. ವಾಸುದೇವ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಗೋಷ್ಠಿಯಲ್ಲಿ ಸಮಾಜದ ಸಂಘಟನಾ ಕಾರ್ಯದರ್ಶಿ ಎಂ.ಕೆ. ಸದಾನಂದ, ಸಲಹೆಗಾರರಾದ ಕೆ.ಸಿ. ಕಾವೇರಪ್ಪ, ರಮೇಶ್ ಪಿಳ್ಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net