

ಬೀರೂರು: ಪಟ್ಟಣದ ಹಾಲಪ್ಪ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣಪತಿಯನ್ನು ರಾತ್ರಿ ಬೃಹತ್ ಶೋಭಯಾತ್ರೆ ಮೂಲಕ ಸಮೀಪದ ದೇವನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ಕಳೆದ 23 ದಿನಗಳಿಂದ ಗಣೇಶ ಮೂರ್ತಿಗೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಶನಿವಾರ ಮಧ್ಯಹ್ನ ವಿಶೇಷ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಸ್ಲಿಂ ಬಾಂಧವರು ಹಣ್ಣು ಹಂಪಲುಗಳನ್ನು ಹಂಚಿ ಸಾಮರಸ್ಯ ಮೆರೆದರು. ಭಾನುವಾರ ಸಂಜೆ 6 ಗಂಟೆಗೆ ಆರಂಭವಾದ ವಿಶೇಷ ಶೋಭಯಾತ್ರೆ ಹೊಸ ಅಜ್ಜಂಪುರ ರಸ್ತೆ ಮಾರ್ಗವಾಗಿ ಮಹಾತ್ಮಗಾಂಧಿ ವೃತ್ತ, ಬಿ.ಹೆಚ್.ರಸ್ತೆ, ಹಳೇಪೇಟೆ ಮೂಲಕ ಲಿಂಗದಹಳ್ಳಿ ರಸ್ತೆಯಿಂದ ಮೂಲಕ ದೇವನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.
ವಿಶಿಷ್ಟವಾದ ಡಿಜೆ ಹಾಡುಗಳಿಗೆ ಯುವಕರು, ಯುವತಿಯರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ಗಣೇಶೋತ್ಸವದ ಅಂಗವಾಗಿ ಪಟ್ಟಣದ ಮಹಾತ್ಮ ಗಾಂಧಿ ವೃತ್ತ ಸೇರಿದಂತೆ ವಿವಿಧೆಡೆ ಕೇಸರಿ ಧ್ವಜಗಳು ರಾರಾಜಿಸಿದವು. ಸಮಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ವಿನಯ್, ಕಾರ್ಯದರ್ಶಿ ರಾಜು, ನಾಗರಾಜು, ಮದೀನಾ ಮಸೀದಿ ಅಧ್ಯಕ್ಷ ರಫೀಕ್, ಶರ್ೀ, ರಫೀಕ್, ರ್ಇಾನ್, ಆಸ್ೀ, ಖಲೀಲ್ ಇದ್ದರು.