

ರಟ್ಟಿಹಳ್ಳಿ: ಪಟ್ಟಣದ ಬೀರಲಿಂಗೇಶ್ವರ ದ್ವಾರಬಾಗಿಲು ಬಳಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಸಭಾ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮವು ವಾದ್ಯ ಮೇಳದೊಂದಿಗೆ ಬೃಹತ್ ಮೆರವಣಿಗೆ ಮೂಲಕ ಗುರುವಾರ ಶಾಂತಿಯುತವಾಗಿ ಜರುಗಿತು.
ಗಣೇಶನ ವಿಸರ್ಜನೆ ನಿಮಿತ್ತ ಮಧ್ಯಾಹ್ನ 12 ಗಂಟೆಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಗಣೇಶನ ವಿಸರ್ಜನೆ ಮೆರವಣಿಗೆಗೆ ಮಾಜಿ ಸಚಿವ ಬಿ.ಸಿ. ಪಾಟೀಲ ಚಾಲನೆ ನೀಡಿ, ಪ್ರತಿವರ್ಷದಂತೆ ಇಲ್ಲಿನ ಹಿಂದು ಮಹಾಸಭಾ ಗಣೇಶನ ಪ್ರತಿಷ್ಠಾಪನೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗುತ್ತಿದ್ದು, ರೈತರಿಗೆ ಉತ್ತಮ ಮಳೆ ಬೆಳೆಯನ್ನು ಗಣೇಶ ಕರುಣಿಸಲಿ ಎಂದರು.
ಬೃಹತ್ ಮೆರವಣಿಗೆ: ಸಂಜೆ 5 ಗಂಟೆಗೆ ಪ್ರಾರಂಭವಾದ ಗಣೇಶನ ವಿಸರ್ಜನೆ ಫ್ರೆಂಡ್ಸ್ ಸರ್ಕಲ್, ಭಗತ್ಸಿಂಗ್ ಸರ್ಕಲ್, ಶಿವಾಜಿ ನಗರ, ಒಕ್ಕಲಗೇರಿ, ಕೋಟೆ ಭಾಗದಲ್ಲಿ ಸಾಗಿ ರಾತ್ರಿ 10 ಗಂಟೆಗೆ ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಹುಬ್ಬಳ್ಳಿ ಆಲ್ಪೆ್ತ್ರನ್ ಪ್ರೊ. ಡಿಜೆ, ಜಾಂಜ್ ಮೇಳ, ಸಮ್ಮಾಳ, ಹಲಗೆಗಳ ನಾದ ಹೀಗೆ ವಿವಿಧ ಕಲಾ ತಂಡಗಳೊಂದಿಗೆ ಸಿಡಿ ಮದ್ದುಗಳನ್ನು ಹಾರಿಸಿ ಬೃಹತ್ ಮೆರವಣಿಗೆಯೊಂದಿಗೆ ಗಣೇಶನ ವಿಸರ್ಜನೆ ಮಾಡಲಾಯಿತು.
‘ಪಟ್ಟಣದಲ್ಲಿ ಹಿಂದು ಮಹಸಭಾ ಗಣೇಶನ ವಿಸರ್ಜನೆ ಶಾಂತಿಯುತವಾಗಿ ನಿಗದಿತ ಸಮಯದಲ್ಲಿ ಜರುಗಿದೆ. ಗಣೇಶ ಹಬ್ಬದ ನಿಮಿತ್ತವಾಗಿ ಶಾಂತಿ ಸಭೆ ಮತ್ತು 2 ಬಾರಿ ಪಥ ಸಂಚಲನ ಮಾಡಲಾಗಿತ್ತು. ಹಿರಿಯ ಅಧಿಕಾರಿಗಳು ಸೇರಿ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಸಿ.ಸಿ. ಕ್ಯಾಮರಾ ಮತ್ತು ಅವಶ್ಯವಿರುವ ಕಡೆ ದೊಡ್ಡ ದೀಪ ಮತ್ತು ಡ್ರೋನ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದರು.
ಗ್ರಾ.ಪಂ. ಮಾಜಿ ಸದಸ್ಯ ಬಸವರಾಜ ಆಡಿನವರ, ಆನಂದಪ್ಪ ಹಾದಿಮನಿ, ಗ್ರಾ.ಪಂ. ಅಧ್ಯಕ್ಷ ಫಕೀರೇಶ ತುಮ್ಮಿನಕಟ್ಟಿ, ದೇವರಾಜ ನಾಗಣ್ಣನವರ, ನಾಗನಗೌಡ ಪ್ಯಾಟಿಗೌಡ್ರ, ಸುನೀಲ ಸರಶೆಟ್ರ, ಮಂಜು ಅಂಗರಗಟ್ಟಿ, ಕಿರಣ ಆಡಿನವರಟ್ರಿತರರು ಭಾಗವಹಿಸಿದ್ದರು