ಹಿಂದು ಮಹಾಗಣಪತಿ ಉತ್ಸವ ಸಮಾರೋಪ, ನವನಗರದಲ್ಲಿ ಪೂಜೆ, ಅದ್ದೂರಿ ವಿಸರ್ಜನೆ ಮೆರವಣಿಗೆ

IMG_20231008_202323_995.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಹಿಂದು ಮಹಾಗಣಪತಿ ಉತ್ಸವ ಮಂಡಳಿ ವತಿಯಿಂದ ಇಲ್ಲಿಯ ನವನಗರ ಪಂಚಾಕ್ಷರಿನಗರ ಮಹಾವೀರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ 21 ದಿನಗಳ ಗಣೇಶನಿಗೆ ಭಾನುವಾರ ವಿದಾಯ ಹೇಳಲಾಯಿತು.

ಬೆಳಗ್ಗೆ 10ಗಂಟೆಗೆ ಉತ್ತರ ಪೂಜೆ ನೆರವೇರಿಸಲಾಯಿತು. ನಂತರ ಗಣಪತಿಗೆ ತೊಡಿಸಿದ ಅಲಂಕಾರ ಹಾಗೂ ವಸ್ತುಗಳ ಸವಾಲ್ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ಗಣೇಶ ಮೂತಿರ್ ವಿಸರ್ಜನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಡಿಜೆ ಅಬ್ಬರ, ಸಂಗೀತಗಳ ಮಧ್ಯೆ ಭಕ್ತರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಅಪ್ಪಾಜಿ ಜನಸೇವಾ ಟ್ರಸ್ಟ್, ನವಶಕ್ತಿ ಮಹಿಳಾ ಮಂಡಳಿ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಉತ್ಸವಕ್ಕೆ ಸಹಾಯ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಇಲ್ಲಿಯ ದೇಶಪಾಂಡೆ ನಗರ ಬಳಿಯ ಮಡಿವಾಳನಗರ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಡಿಜೆ, ಸಂಗೀತದ ಅಬ್ಬರದ ಮಧ್ಯೆ ವಿಸರ್ಜನೆ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net