ಹಿಂದು ಮಹಾಗಣಪತಿ ಶೋಭಾಯಾತ್ರೆ 29ಕ್ಕೆ

Hindu, Mahaganapati, Shobhayatra,
Published on

ಹರಿಹರ: ನಗರದಲ್ಲಿ 29ರ ಭಾನುವಾರ ಹಿಂದು ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಮಹಾ ಗಣಪತಿ ಟ್ರಸ್ಟ್‌ನ ಅಧ್ಯಕ್ಷ ಬಸವನಗೌಡ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನಗರದ ಪೇಟೆ ಅಂಜನೇಯ ದೇವಸ್ಥಾನ ಆವರಣದಿಂದ ಬೆಳಗ್ಗೆ 11 ಗಂಟೆಯಿಂದ ಆರಂಭವಾಗುವ ಶೋಭಾಯಾತ್ರೆಯಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಜನ ಆಗಮಿಸುವ ನೀರಿಕ್ಷೆಯಿದೆ ಎಂದರು.

ವಿವಿಧ ಕಲಾತಂಡ ಹಾಗೂ ಮೂರು ಡಿಜೆ ಸೌಂಡ್ ಸಿಸ್ಟಮ್‌ಗಳ ವ್ಯವಸ್ಥೆ ಮಾಡಿದ್ದು, ಮಹಿಳೆಯರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದರು.

ಬೆಳಗ್ಗೆ 11ರಿಂದ ಆರಂಭವಾಗುವ ಮೆರವಣಿಗೆ ಪೇಟೆ ಆಂಜನೇಯ ದೇವಸ್ಥಾನದಿಂದ ಶೋಭಾ ಟಾಕೀಸ್ ರಸ್ತೆ ಮುಖಾಂತರ ನಗರಸಭೆ ಮುಂಭಾಗದ ಹಳೇ ಪಿ.ಬಿ ರಸ್ತೆ ಮೂಲಕ ಗಾಂಧಿ ವೃತ್ತ, ಮುಖ್ಯ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ನಂತರ ಫಕ್ಕಿರಸ್ವಾಮಿ ಮಠ, ಶಿವಮೊಗ್ಗ ರಸ್ತೆ ಬಲ ರಸ್ತೆಯಿಂದ ಪುನಃ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ತಲುಪಿ ದೇವಸ್ಥಾನ ರಸ್ತೆ. ಶಿಬಾರ ವೃತ್ತ , ಐಬಿ ರಸ್ತೆಯಿಂದ ಹಳೇ ಪಿ.ಬಿ ರಸ್ತೆಯ ಮೂಲಕ ರಾಘವೇಂದ್ರ ದೇವಸ್ಥಾನದ ಬಳಿಯ ತುಂಗಭದ್ರಾ ನದಿಯಲ್ಲಿ ರಾತ್ರಿ 9:30ಕ್ಕೆ ವಿಸರ್ಜನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಬೈಕ್ ರ‌್ಯಾಲಿ: ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು, ಅಂದಾಜು 500ಕ್ಕೂ ಹೆಚ್ಚು ಬೈಕ್‌ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದು ಜಾಗರಣಾ ವೇದಿಕೆಯ ಎಚ್. ದಿನೇಶ್, ಹಿಂದು ಮಹಾ ಗಣಪತಿ ಸಮಿತಿಯ ರಾಘವೇಂದ್ರ ಉಪಾಧ್ಯಾಯ, ಸ್ವಾತಿ ಹನುಮಂತ, ರಟ್ಟಿಹಳ್ಳಿ ಮಂಜುನಾಥ್, ಸಂತೋಷ್ ಗುಡಿಮನಿ, ಚಂದ್ರಕಾಂತ ಗೌಡ, ಅನಂದ್‌ಕುಮಾರ್, ಸುನಾಮಿ ರಮೇಶ್, ಕಾರ್ತಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net