ಹಿಂದು ಮಹಾಗಣಪತಿ ವಿಸರ್ಜನೆ ಇಂದು

HINDU MAHAGANAPATI
Published on


ಬಂಕಾಪುರ: ಪಟ್ಟಣದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸೆ. 27ರಂದು ಬೆಳಗ್ಗೆ 11 ಗಂಟೆಗೆ ಆರಂಭಗೊಂಡು ಅಹೋರಾತ್ರಿವರೆಗೆ ನಡೆಯಲಿದೆ.
ನೆಹರು ಗಾರ್ಡನ್​ನಿಂದ ಆರಂಭವಾಗುವ ಮೆರವಣಿಗೆಗೆ ಸಂಸದರಾದ ಬಸವರಾಜ ಬೊಮ್ಮಾಯಿ, ಪ್ರಲ್ಹಾದ ಜೋಶಿ, ಅರಳೆಲೆಮಠದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರು ಚಾಲನೆ ನೀಡುವರು. ಕೆನರಾ ಬ್ಯಾಂಕ್, ಆಸಾರ ಸರ್ಕಲ್, ನಾಡಕಚೇರಿ, ಯಲ್ಲಮ್ಮ ದೇವಸ್ಥಾನ, ಟಾಕೀಜ್ ಸರ್ಕಲ್, ಕಲಕಟ್ಟಿ ಮಾರ್ಗವಾಗಿ, ಅರಳೆಲೆಮಠ, ಸುಂಕದಕೇರಿ, ಮಂಡಲ್ ಮೊಹಲ್ಲಾ, ಅಂಬೇಡ್ಕರ್ ನಗರ, ಕೊಟ್ಟಿಗೇರಿಯಿಂದ ಹಾನಗಲ್ಲ ಮಾರ್ಗವಾಗಿ ಗುಡ್ಡದಚನ್ನಾಪುರ ಕೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ. ಹುಬ್ಬಳ್ಳಿಯ ಪ್ರಸಿದ್ಧ ಡಿಜೆ ಸೇರಿ ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಮೆರುಗು ತರಲಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಯಕಟ್ಟಿನ ಸ್ಥಳ, ಪ್ರಾರ್ಥನಾ ಮಂದಿರ ಸೇರಿ ವಿವಿಧೆಡೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಜತೆಗೆ ಪಟ್ಟಣದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net