ಹಿಂದು ಮಹಾಗಣಪತಿ ವಿಸರ್ಜನೆ ನಾಳೆ

23 LXR GANAPA
Published on

ಲಕ್ಷ್ಮೇಶ್ವರ: ಪಟ್ಟಣದ ಪೇಠೆ ಹನುಮಂತದೇವರ ದೇವಸ್ಥಾನ ಹತ್ತಿರ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿಯ ವಿಸರ್ಜನಾ ಮೆರವಣಿಗೆ ಸೆ.25ರಂದು ಮಧ್ಯಾಹ್ನ 1ಗಂಟೆಗೆ ಪ್ರಾರಂಭವಾಗಲಿದೆ. 21 ಅಡಿ ಎತ್ತರದ ಬೃಹತ್ ಮೂರ್ತಿಯನ್ನು ಹಿಂದು ಮಹಾಸಭಾದ ಯುವಕರ ತಂಡವು ಪ್ರತಿಷ್ಠಾಪಿಸಿದೆ. ಸಮಿತಿ ವತಿಯಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಫಕೀರೇಶ ಅಣ್ಣಿಗೇರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net