

ಆಳಂದ: ಶ್ರೀರಾಮ ಮಾರ್ಕೆಟ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ವಿಸರ್ಜನೆ ಮತ್ತು ಶೋಭಾಯಾತ್ರೆ ಸೋಮವಾರ ನಡೆಯಲಿದೆ ಎಂದು ಹಿಂದು ಮಹಾಗಣಪತಿ ಸಂಘದ ಅಧ್ಯಕ್ಷ ಮಹೇಶ ಗೌಳಿ ತಿಳಿಸಿದರು.
ಸತತ 8 ವರ್ಷಗಳಿಂದ ಹಿಂದು ಮಹಾಗಣಪತಿ ಪ್ರತಿಷ್ಠಾಪಿಸಿ ಅದ್ದೂರಿ ವಿಸರ್ಜನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿಯ ಶೋಭಾಯಾತ್ರೆಗೆ ಕೇಂದ್ರ ಸಚಿವ ಭಗವಂತ ಖೂಬಾ, ವಿಜಯಪುರ ಶಾಸಕ ಬಸನಗೌಡ ಯತ್ನಾಳ ಚಾಲನೆ ನೀಡುವರು. ಮಾಜಿ ಶಾಸಕ ಸುಭಾಷ ಗುತ್ತೇದಾರ್, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್ ಇತರರು ಪಾಲ್ಗೊಳ್ಳಲಿದ್ದಾರೆ. ಭವ್ಯ ಮೆರವಣಿಗೆಯಲ್ಲಿ ತಮಿಳುನಾಡಿನ ತೈಯಂ ಕೃತಾ, ಬೆಂಗಳೂರಿನ ತಮಟೆ ವಾದ್ಯಗಳು ಪ್ರದರ್ಶನ ನೀಡಲಿವೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷ ಈರಣ್ಣ ಹತ್ತರಕಿ, ಪ್ರಮುಖರಾದ ನಾಗನಾಥ ಏಟೆ, ಸಂತೋಷ ಪವಾರ್, ಗಣೇಶ ಭೋಸಲೆ, ತಿಪ್ಪೇರುದ್ರ ಮಠಪತಿ ಇತರರಿದ್ದರು.