

ನಗರದ ಹಿಂದೂ ಮಹಾಗಣಪತಿ ಎಂದು ಜಿಲ್ಲೆಯಾದ್ಯಂತ ಪ್ರಸಿದ್ಧಿ ಪಡೆದ ಮಾರುಕಟ್ಟೆ ಗಣಪತಿಯ ವಿಸರ್ಜನೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾಗಣಪತಿ ಸಮಿತಿ ಕಾರ್ಯದರ್ಶಿ ಮಾಹಾಂತೇಶ ನೆಲೂಡಿ ಹೇಳಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಹಿಂದೂ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ರಾಜು ಖಾನಪ್ಪನ್ನವರ ಮಾತನಾಡಿ, ಖಾನ್ ತೋಟ ಸಾರ್ವಜನಿಕ ಗಣಪತಿಯು 2018 ರ ನಂತರ ಹಿಂದೂ ಗಣಪತಿ ಎಂದು ಪ್ರಸಿದ್ಧಿ ಪಡೆದಿದೆ. ವಿಸರ್ಜನೆ ದಿನ ಮಾಹಾ ಪುರಷರ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ಹಿಂದೂ ಧರ್ಮದಲ್ಲಿ ಇರುವ ಜಾತಿ ವ್ಯವಸ್ಥೆ ಹೋಗಲಾಡಿಸಿ ಎಲ್ಲರೂ ಒಂದು ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಮಹಾಪುರುಷರ ಭಾವಚಿತ್ರ ಮೆರವಣಿಗೆ ನಡೆಸಲಾಗುತ್ತಿದೆ. ಖಾನ್ ತೋಟ, ವೀರನಾರಾಯಣ ದೇವಸ್ಥಾನ, ಟಾಂಗಾಕೂಟ್ ಮಾರ್ಗವಾಗಿ ಸಂಚರಿಸಿ ಭೀಷ್ಮಕೆರೆಯಲ್ಲಿ ವಿಸರ್ಜನೆ ನಡೆಸಲಾಗುವುದು ಎಂದರು. ಪೋಷಕರು ತಮ್ಮ ಮಕ್ಕಳಿಗೆ ಬಾಲಗಂಗಾಧರ ತಿಲಕ, ಶಿವಾಜಿ ಮಹಾರಾಜ್ ಸೇರಿದಂತೆ ಇತರ ಮಹಾಪುರುಷರ ವೇಷಭೂಷಣ ತೋಡಿಸಿ ಮೆರವಣಿಗೆಯಲ್ಲಿ ಭಾಗವಹಿಸಿದರೆ, ಮೆರವಣಿಗೆಯಲ್ಲಿ ವಿಶೇಷ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿದ್ದು, ಟ್ರ್ಯಾಕ್ಟರ್ ನಲ್ಲಿ ಅವಕಾಶ ಮಾಡಲಾಗುವುದು ಎಂದರು.
ಸಂಗಮೇಶ ಕೌಳಿಕಾಯಿ, ರವಿ ಕರಬಸಣ್ಣವರ, ರವಿ ಹರ್ತಿ, ಕಿರಣ ಹಿರೇಮಠ, ಸತೀಶ ಕುಂಬಾರ ಇದ್ದರು.