

ಸಿದ್ದಾಪುರ: ಈದ್ ಮಿಲಾದ್ ಹಬ್ಬದ ನಿಮಿತ್ತ ಗ್ರಾಮದ ಹಿಂದು ಮಹಾ ಮಂಡಳಿ ಗಣೇಶನಿಗೆ ಮುಸಲ್ಮಾನರು ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಮುಸ್ಲಿಂ ಮುಖಂಡ ಮಹೆಬೂಬ್ ಮುಲ್ಲಾ ಮಾತನಾಡಿ, ಯಾವುದೇ ಬೇಧವಿಲ್ಲದೆ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಶರಣಬಸವೇಶ್ವರ ಜಾತ್ರೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಆಚರಿಸುತ್ತೇವೆ. ಪ್ರಮುಖರಾದ ದಸ್ತಗಿರಿ ಸಾಬ್, ಶ್ಯಾಮೀದ್, ಬುಡ್ಡ, ಮೌಲಪ್ಪ, ಆಲಂ ಬಾಷಾ, ಅಬ್ದುಲ್, ಮನೋಜ್ ಸಜ್ಜನ್, ಅಮರ್ ಹಳೇಮನಿ, ಕಾರ್ತಿಕ್ ಬಸೆಟ್ಟರ್, ಅಮರೇಶ್ ಸಿಂಗನಾಳ, ಅಕ್ಷಯ್ ಸಂಕನಾಳ, ಅಭಿಷೇಕ ಹಿರೇಮಠ, ವಿಜಯ ಬೇರ್ಗಿ, ದಯ ಶಂಕರ್ ಮಠಪತಿ, ನಂದೀಶ್, ವೀರೇಶ್ ಸೋಮನಾಥರ್ ಇತರರಿದ್ದರು.