

ಪಾವಗಡ: ಪಟ್ಟಣದ ಮಧುಗಿರಿ ಊರ ಬಾಗಿಲಿನಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ಶ್ರೀರಾಮ ಸೇನೆ ಸೇರಿದಂತೆ ಹಿಂದು ಸಂಘಟನೆಗಳು 3ನೇ ವರ್ಷದ ಹಿಂದು ಮಹಾಗಣಪತಿಯ ಪೂಜೆಗೆ ಇಟ್ಟಿದ್ದ ಲಡ್ಡು ಹರಾಜು ಪ್ರಕ್ರಿಯೆಯನ್ನು ಶುಕ್ರವಾರ ರಾತ್ರಿ ನಡೆಸಲಾಯಿತು.
ಹರಾಜಿನಲ್ಲಿ ಬತ್ತಿನೇನಿ ಅರುಣ್ 2.55 ಲಕ್ಷ ರೂ. ಹರಾಜು ಕೂಗಿ ಲಡ್ಡನ್ನು ತಮ್ಮದಾಗಿಸಿಕೊಂಡರು. ಅವರನ್ನು ಹಿಂದು ಮಹಾಗಣಪತಿ ಸಮಿತಿಯಿಂದ ಸನ್ಮಾನಿಸಲಾಯಿತು. ಬಜರಂಗದಳದ ಶೇಖರ್ ಬಾಬು, ರಘವೇಂದ್ರ, ಸುಬ್ಬು, ನಂಜುಂಡ, ರಾಮ್ ಚರಣ್, ವಂಶಿ, ಚರಣ್, ಮಹೇಶ್, ನಾಗೇಂದ್ರ, ವೆಂಕಟೇಶ್, ಜಿತೇಂದ್ರ, ನಾನಿ ಇದ್ದರು.