ಹಿಂದೂಮಹಾ ಗಣಪತಿ ವಿಸರ್ಜನೆ ಸಂಪನ್ನ

22 ckm 2
ಚಿಕ್ಕಮಗಳೂರು ಸಮೀಪದ ಸಖರಾಯಪಟ್ಟಣದ ಹಿಂದುಮಹಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
Published on

ಚಿಕ್ಕಮಗಳೂರು: ತಾಲೂಕಿನ ಸಖರಾಯಪಟ್ಟಣ ಗ್ರಾಮದಲ್ಲಿ ಶ್ರೀ ಹಿಂದೂ ಮಹಾಗಣಪತಿ ಸೇವಾ ಸಮಿತಿ ೧೫ ದಿನಗಳಿಂದ ಆಯೋಜಿಸಿದ್ದ ಮೂರನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಭಾನುವಾರ ಅತ್ಯಂತ ವೈಭವದಿಂದ ಸಂಪನ್ನಗೊAಡಿತು.

ಹಿAದೂ ಮಹಾಗಣಪತಿ ಪ್ರತಿಷ್ಟಾಪನೆ ಅಂಗವಾಗಿ ಗಣಹೋಮ, ವಿವಿಧ ಕಾರ್ಯಕ್ರಮಗಳಾದ ಆರ್ಕೆಸ್ಟಾç, ಜಿಗ್‌ಜಾಗ್ ಬೈಕ್ ರೇಸ್, ಕಬ್ಬಡಿ ಪಂದ್ಯಾವಳಿ ಸೇರಿದಂತೆ ಆಟೋಟ ಸ್ಪರ್ಧೆಗಳು ನೋಡುಗರ ಮನಸೂರೆಗೊಂಡವು.
ವಿಸರ್ಜನ ಮಹೋತ್ಸವದ ಹಿಂದಿನ ದಿನ ಸುಮಾರು ೬೦೦ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಅನ್ನ ಪ್ರಸಾದ ಸಮಿತಿ ಪ್ರಮುಖರಾದ ಎಸ್.ಎಚ್.ಪುಟ್ಟಸ್ವಾಮಿ, ಮುತ್ತಣ್ಣ, ವಸಂತ್ ಕುಮಾರ್, ವಿನಾಯಕ ನೇತೃತ್ವದಲ್ಲಿ ಗಣಪತಿ ಸಮಿತಿಯ ಸದಸ್ಯರು ಅನ್ನಸಂತರ್ಪಣೆ ಅಚ್ಚುಕಟ್ಟಾಗಿ ನೆರವೇರಿಸಿದರು.
ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವಿಜೃಂಭಣೆಯಿAದ ಭಾನುವಾರ ನಡೆಯಿತು. ಗ್ರಾಮದ ಮುಖ್ಯರಸ್ತೆಗಳು ಕೇಸರಿಮಯದಿಂದ ಕೂಡಿತ್ತು. ಶಿವ, ರಾಮನ ಹಾಗೂ ಆಂಜನೇಯನ ಬೃಹತ್ ವಿಗ್ರಹಗಳು ಮೆರವಣಿಗೆ ಇನ್ನಷ್ಟು ಕಳೆತಂದಿದ್ದವು. ಸುಮಾರು ೭೦೦ಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೆ.ಎಂ.ರಸ್ತೆಯಿAದ ಮೆರವಣಿಗೆ ಬರುತ್ತಿದ್ದಂತೆ ಅಂಗಡಿ ಮುಂಗಟ್ಟು ದಾರರು ಶ್ರೀಗಣಪತಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಚಲನಚಿತ್ರ ಗೀತೆ ಹಾಗೂ ವಿವಿಧ ವಾದ್ಯಗಳಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸ್ಥಳೀಯ ಗ್ರಾಮಸ್ಥರು ಮೆರವಣಿಗೆಯಲ್ಲಿ ಸಾಗಿದ ಕಲಾತಂಡಗಳಿಗೆ ಹಾಗೂ ಸಾರ್ವಜನಿಕರಿಗೆ ಜ್ಯೂಸ್, ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದರು. ಗ್ರಾಮದ ಸುತ್ತಮುತ್ತಲಿನ ಅನೇಕ ದಾನಿಗಳು ಗಣೇಶೋತ್ಸವ ಆಚರಣೆಗೆ ಸಹಕರಿಸಿದರು.
ತದನಂತರ ಹಿಂದೂ ಮಹಾಗಣಪತಿ ಮೆರವಣಿಗೆ ಶ್ರೀ ಶಕುನರಂಗನಾಥ ಸ್ವಾಮಿ ದೇವಾಲಯದ ಮೂಲಕ ಹಾದು ಗ್ರಾಮದ ಸುತ್ತಮುತ್ತಲು ಸಾಗಿದ ವೇಳೆ ನಿವಾಸಿಗಳು ಭಕ್ತಿಪರವಶರಾದರು. ಗಣಪತಿ ಮೆರವಣಿಗೆ ಮನೆಗಳ ಬಳಿ ಬರುತ್ತಿದ್ದಂತೆ ನಿವಾಸಿಗಳು ಪೂಜೆ ಸಲ್ಲಿಸಿದರು. ಮೆರವಣಿಗೆ ಬಳಿಕ ಸುಬ್ರಮಣ್ಯ ದೇವಾಲಯದ ಕಲ್ಯಾಣಿಯಲ್ಲಿ ಗಣಪತಿಯನ್ನು ವಿಸರ್ಜಿಸಲಾಯಿತು.
ಈ ವೇಳೆ ಮಾತನಾಡಿದ ಸಮಿತಿ ಮುಖ್ಯಸ್ಥ ದೀಪು, ಯುವಕರ ತಂಡವು ಗಣೇಶೋತ್ಸವ ಸಂಬAಧ ಹಣ ಸಂಗ್ರಹಿಸಿ ಹಿಂದೂ ಮಹಾಗಣಪತಿ ಸ್ಥಾಪಿಸಿ ಪ್ರತಿ ವರ್ಷವು ಹಬ್ಬ ಆಚರಿಸಲಾಗುತ್ತಿದೆ. ಇದೀಗ ಮೂರನೇ ವರ್ಷ ಪೂರೈಸಿದ ಹಿನ್ನೆಲೆ ವಿವಿಧ ಕಲಾತಂಡಗಳನ್ನು ಕರೆಯಿಸಿ ಅತ್ಯಂತ ಅದ್ದೂರಿಯಿಂದ ಗಣೇಶೋ ತ್ಸವ ಆಚರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರಾದ ಅರವಿಂದ್, ಸಂತೋಷ್, ಮಿಥುನ್, ನಿತಿನ್, ವಿಜಯ್, ಗಣೇಶ್, ಸಂಜಯ್, ಇಂದುಕುಮಾರ್, ಮುಖಂಡರಾದ ಎಸ್.ಆರ್.ಯೋಗೀಂದ್ರ, ಪಾದಮನೆ ದಿನೇಶ್, ನಾಗೇಗೌಡ, ಪ್ರದೀಪ್, ಆನಂದನಾಯ್ಕ್, ದರ್ಶನ್‌ನಾಯ್ಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net